ಜ.1ರಂದು ಯೋಧ ಪಳಂಗೋಟು ದಿವಿನ್ ಅಂತ್ಯಕ್ರಿಯೆ

Update: 2024-12-31 15:22 GMT

ಮಡಿಕೇರಿ : ಜಮ್ಮು ಕಾಶ್ಮೀರದ ಪೂಂಚ್‍ನಲ್ಲಿ ಸಂಭವಿಸಿದ ಸೇನಾ ವಾಹನ ಅವಘಡದಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ವೀರ ಯೋಧ ಕೊಡಗಿನ ಪಳಂಗೋಟು ಪಿ.ದಿವಿನ್(28) ಅವರ ಅಂತ್ಯಕ್ರಿಯೆ ಜ.1 ರಂದು ಬುಧವಾರ ಅವರ ಸ್ವಗ್ರಾಮದಲ್ಲಿ ನಡೆಯಲಿದೆ.

ಕೆಲವು ದಿನಗಳ ಹಿಂದೆ ಪೂಂಚ್‍ನಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿ ಗಾಯಗೊಂಡಿದ್ದ ದಿವಿನ್ ಅವರಿಗೆ ಶ್ರೀನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಇಂದು ಶ್ರೀನಗರದಿಂದ ವಿಮಾನದ ಮೂಲಕ ದಿವಿನ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಈ ಸಂದರ್ಭ ಸಂಸದ ಯದುವೀರ್ ಅವರು ವೀರ ಯೋಧನಿಗೆ ಗೌರವ ನಮನ ಸಲ್ಲಿಸಿದರು.

ಕೊಡಗಿನ ಕುಶಾಲನಗರದ ಮೂಲಕ ಉತ್ತರ ಕೊಡಗಿನ ಶನಿವಾರಸಂತೆ ಬಳಿಯ ಆಲೂರು ಸಿದ್ದಾಪುರಕ್ಕೆ ರಾತ್ರಿ ಪಾರ್ಥಿವ ಶರೀರ ತಲುಪಲಿದ್ದು, ಬುಧವಾರ ಆಲೂರು ಸಿದ್ದಾಪುರದ ಸರಕಾರಿ ಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News