ದಕ್ಷಿಣ ಭಾರತ ಹಾಕಿ ತಂಡಕ್ಕೆ ಪರ್ಲಿನ್ ಪೊನ್ನಮ್ಮ ಆಯ್ಕೆ

Update: 2024-09-02 08:52 GMT

ಮಡಿಕೇರಿ: ನಗರದ ಕೊಡಗು ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿನಿ ಎ.ಜಿ ಪರ್ಲಿನ್ ಪೊನ್ನಮ್ಮ ದಕ್ಷಿಣ ಭಾರತ ಸಬ್ ಜೂನಿಯರ್ ಮಹಿಳಾ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ದಕ್ಷಿಣ ಭಾರತ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾದ್ದಾರೆ.

ಈ ಮೊದಲು ಕರ್ನಾಟಕ ಸಬ್ ಜೂನಿಯರ್ ಮಹಿಳೆಯರ ತಂಡದ ಉಪನಾಯಕಿಯಾಗಿ ಆಯ್ಕೆಯಾಗಿ ಎರಡು ಪಂದ್ಯಗಳಲ್ಲಿ ಉತ್ತಮ ಆಟಗಾರ್ತಿ ಎಂಬ ಬಿರುದುಗಳಿಸಿ ಇದೀಗ ದಕ್ಷಿಣ ಭಾರತ ಸಬ್ ಜೂನಿಯರ್ ಮಹಿಳಾ ತಂಡದ ಚುಕ್ಕಾಣಿ ಹಿಡಿದಿದ್ದಾಳೆ.

ಪರ್ಲಿನ್ ಪೊನ್ನಮ್ಮ ಸೆಪ್ಟೆಂಬರ್ 7 ರವರೆಗೆ ಹರಿಯಾಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿಭಾಗ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡಿದ್ದಾಳೆ ಎಂದು ಕೊಡಗು ವಿದ್ಯಾಲಯದ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News