ಮಕ್ಕಳಲ್ಲಿ ಕನ್ನಡ ಭಾಷಾ ಮೋಹ ಬೆಳೆಸುವಲ್ಲಿ ಮಹಿಳೆಯರು ಮುಖ್ಯ ಪಾತ್ರ ವಹಿಸಬೇಕು - ಕೆ.ಪಿ. ಬಾಲಸುಬ್ರಹ್ಮಣ್ಯ

Update: 2023-11-05 09:05 GMT

ಮಡಿಕೇರಿ ನ.5 - ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಸುವಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದು, ಮನೆಯಲ್ಲಿ ಕನ್ನಡ ಭಾಷೆಯ ಶಿಕ್ಷಕಿಯರಂತೆ ಮಕ್ಕಳಿಗೆ ಕನ್ನಡದ ಹಿರಿಮೆ ತಿಳಿಸುವ ಕೆಲಸವನ್ನು ಮಹಿಳೆಯರು ಮಾಡಬೇಕಾಗಿದೆ ಎಂದು ಹಿರಿಯ ಸಾಹಿತಿ, ವಕೀಲ ಬಾಲಸುಬ್ರಹ್ಮಣ್ಯ ಕಂಜಪ೯ಣೆ ಹೇಳಿದ್ದಾರೆ.

ನಗರದಲ್ಲಿ ಸಮಥ೯ ಕನ್ನಡಿಗ ಸಂಸ್ಥೆ ವತಿಯಿಂದ ಆಯೋಜಿತ ನಮ್ಮ ವೇದಿಕೆ - ನಿಮ್ಮ ಪ್ರತಿಭೆ ಕನ್ನಡ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳೊಂದಿಗೆ ಮನೆಯಲ್ಲಿಯಾದರೂ ತಾಯಂದಿರು ಕನ್ನಡದಲ್ಲಿ ಮಾತನಾಡುತ್ತಿರಬೇಕು. ಈ ಮೂಲಕ ಮಾತೃ ಭಾಷೆಯನ್ನು ಮಕ್ಕಳಿಗೆ ಕಲಿಸುವಂತಾಗಬೇಕು. ಮಹಿಳೆಯರು ಮನೆಯಲ್ಲಿ ಪ್ರಧಾನ ಪಾತ್ರ ವಹಿಸುವುದರಿಂದಾಗಿ ಸುಲಭವಾಗಿ ಮಕ್ಕಳಲ್ಲಿ ಕನ್ನಡದ ಮಹತ್ವ ಹಾಸುಹೊಕ್ಕಾಗಲು ಸಾಧ್ಯವಾಗುತ್ತದೆ. ಹಿಂದಿನ ಕಾಲದ ಪಠ್ಯದಲ್ಲಿ ಪ್ರ - ಪ್ರ ಎಂಬ ವಿಭಾಗ ಇರುತ್ತಿತ್ತು. ಅಂದರೆ ಪ್ರಶ್ನೆ - ಪ್ರಕಾರ ಎಂದಥ೯ ಇತ್ತು. ಈಗಿನ ಕಾಲದಲ್ಲಿ ಪ್ರ- ಪ್ರ- ಪ್ರ- ಪ್ರ ಎಂದರೆ ಪ್ರಚಾರ, ಪ್ರತಿಷ್ಟೆ, ಪ್ರಸಿದ್ದಿ, ಪ್ರಶಸ್ತಿ ಎಂದಥ೯ ಬರುವಂತಾಗಿದೆ. ಎಲ್ಲರೂ ಈ ನಾಲ್ಕೂ ಪ್ರ ಗಳ ಹಿಂದೆ ಬಿದ್ದಂತಿದೆ ಎಂದೂ ಬಾಲಸುಬ್ರಹ್ಮಣ್ಯ ಕಂಜಪ೯ಣೆ ಅಭಿಪ್ರಾಯಪಟ್ಟರು.

ಕಾಯ೯ಕ್ರಮಗಳಲ್ಲಿ ಪಾಶ್ಚಾತ್ಯ ಗೀತೆಗಳನ್ನು ಹಾಡಿಸುವ ಬದಲಿಗೆ ಕನ್ನಡ ಗೀತಗಾಯನಕ್ಕೆ ಪ್ರಾಶಸ್ತ್ಯ ನೀಡಿ ಎಂದು ಸಲಹೆ ನೀಡಿದ ಬಾಲಸುಬ್ರಹ್ಮಣ್ಯ ಕಂಜಪ೯ಣೆ, ಕನ್ನಡ ಭಾಷೆ, ಸಂಸ್ಕೖತಿ ಸಂಬಂಧಿತ ಸ್ಪಧೆ೯ಗಳಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿನ ಭಾಷಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಶಾದಾಯಕ ನುಡಿಗಳನ್ನು ಆಡಿ ಮಕ್ಕಳ ಪ್ರತಿಭೆಯನ್ನು ಪ್ರಶಂಸಿಸುವುದು ಸೂಕ್ತ ಎಂದೂ ಸಲಹೆ ನೀಡಿದರು. ಸ್ಪಧೆ೯ ಯಾವುದೇ ಇದ್ದರೂ ಪ್ರತಿಭಾವಂತ ಮಕ್ಕಳ ಜತೆಗೇ ಎಲ್ಲಾ ಮಕ್ಕಳನ್ನೂ ಆಯೋಜಕರು ಸಮಾನಾಗಿ ಕಾಣುವ ಮೂಲಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ ಉತ್ಸಾಹವನ್ನು ಬಾಲ್ಯದಲ್ಲಿಯೇ ಮೂಡಿಸುವಂತಾಗಬೇಕು ಎಂದೂ ಅವರು ಕಿವಿಮಾತು ಹೇಳಿದರು.

ಕನ್ನಡ ಪರ ಕಾಯ೯ಕ್ರಮಗಳು ಎಲ್ಲಾ ವಗ೯ದವರು ಪಾಲ್ಗೊಳ್ಳುವಂಥ ಮೌಲ್ಯಯುತ ಕಾಯ೯ಕ್ರಮಗಳಾಗಬೇಕು. ಈ ನಿಟ್ಟಿನಲ್ಲಿ ಕನಾ೯ಟಕ ನಾಮಕರಣದ ಸುವಣ೯ ಸಂಭ್ರಮದ ಈ ಒಂದು ವಷ೯ ಕೊಡಗಿನಲ್ಲಿಯೂ ಉತ್ತಮ ಕಾಯ೯ಕ್ರಮಗಳು ಮೂಡಿಬರುವಂತಾಗಲಿ ಎಂದು ಹಾರೈಸಿದರು.

ಹಾಸನದ ಉಪನ್ಯಾಸಕಿ ಉಮಾನಾಗರಾಜ್ ಮಾತನಾಡಿ, ಯುವಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಸಮಥ೯ ಕನ್ನಡಿಗರು ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಕಾಯ೯ಕ್ರಮಗಳು ಸಾಹಿತ್ಯ ಪರಂಪರೆಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು.

ಸಮಥ೯ ಕನ್ನಡಿಗ ಸಂಸ್ಥೆಯ ಜಿಲ್ಲಾ ಪ್ರಧಾನ ಸಂಚಾಲಕಿ ಕೆ.ಜಯಲಕ್ಷ್ಮಿ ಮಾತನಾಡಿ, ಕಳೆದ 5 ವಷ೯ಗಳಿಂದ ರಾಜ್ಯಮಟ್ಟದ ಸಮಥ೯ ಕನ್ನಡಿಗ ಸಂಸ್ಥೆಯುವ ಕೊಡಗಿನಲ್ಲಿ ಕನ್ನಡ ಭಾಷೆ, ಸಂಸ್ಕೖತಿ ಸಂಬಂಧಿತ ಅನೇಕ ಕಾಯ೯ಕ್ರಮಗಳನ್ನು ರೂಪಿಸುತ್ತಾ ಬರುತ್ತಿದೆ. ಸಕಾ೯ರದಿಂದ ಯಾವುದೇ ಅನುದಾನ ಇಲ್ಲದೇ ಸ್ಪಧಿ೯ಗಳಿಂದಲೂ ಪ್ರವೇಶ ಶುಲ್ಕ ಪಡೆಯದೇ ಸಮಥ೯ ಕನ್ನಡಿಗ ಸಂಸ್ಥೆಯಲ್ಲಿರುವ ಸದಸ್ಯೆಯರು ಸ್ವಂತ ಹಣದಿಂದ ಮತ್ತು ದಾನಿಗಳ ನೆರವಿನಿಂದ ವೈವಿಧ್ಯಮಯ ಕಾಯ೯ಕ್ರಮ ರೂಪಿಸುತ್ತಾ ಬಂದಿದ್ದಾರೆ ಎಂದರು. ಸಮಥ೯ ಕನ್ನಡಿಗರು ಸಂಸ್ಥೆಯ ಸಮಾಜಮುಖಿ ಕಾಯ೯ಗಳು ಜನರ ಮೆಚ್ಚುಗೆಗೆ ಪಾತ್ರವಾಗಿರುವುದು ಸಂಸ್ಥೆಯ ಹೆಗ್ಗುರುತಾಗಿದೆ ಎಂದೂ ಜಯಲಕ್ಷ್ಮಿ ಹೇಳಿದರು.

ವೇದಿಕೆಯಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಸಾಹಿತಿ ಅಂಬೆಕಲ್ ಸುಶೀಲ ಕುಶಾಲಪ್ಪ, ವಿರಾಜಪೇಟೆಯ ಲೇಖಕಿ ಪುಪ್ಪಲತ ಶಿವಪ್ಪ ಸಮಥ೯ ಕನ್ನಡಿಗರು ಸಂಸ್ಥೆಯ ರಾಜ್ಯ ಸಂಚಾಲಕರಾದ ಆನಂದ್ ದೆಗ್ಗನಹಳ್ಳಿ, ಹೇಮಂತ್ ಹಾಜರಿದ್ದರು. ಸಮಥ೯ ಕನ್ನಡಿಗರು ಸಂಸ್ಥೆಯ ಚಿತ್ರಾ ಆಯ೯ನ್ ಪ್ರಾಥಿ೯ಸಿ, ಪ್ರೀತಾ ಕೖಷ್ಣ ಸ್ವಾಗತಿಸಿ, ಗಿರಿಜಾಮಣಿ ವಂದಿಸಿದ ಕಾಯ೯ಕ್ರಮವನ್ನು ಲೇಖಕಿ, ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ನಿರೂಪಿಸಿದರು.

ಕೊಡಗಿನ ವಿವಿಧ ಶಾಲಾ ವಿದ್ಯಾಥಿ೯ಗಳು, ವಿದ್ಯಾಥಿ೯ ತಂಡಗಳಿಂದ ಛದ್ಮವೇಶ, ನೖತ್ಯ, ಮಹಿಳಾ ತಂಡಗಳಿಂದ ಸಮೂಹ ಗಾಯನ, ಸಮೂಹ ನೖತ್ಯ ಸ್ಪಧೆ೯ಗಳು ಆಯೋಜಿಸಲ್ಪಟ್ಟಿದ್ದವು.


ಕನ್ನಡ ಹಬ್ಬಕ್ಕೆ ಕಲ್ಲುಸಕ್ಕರೆಯ ಸವಿ ಕೊಡುಗೆ.

ಸಮಥ೯ ಕನ್ನಡಿಗರು ಸಂಸ್ಥೆಯ ಕನ್ನಡ ಹಬ್ಬ ಕಾಯ೯ಕ್ರಮದಲ್ಲಿ ಅತಿಥಿಗಳಿಗೆ, ಕಲಾಪ್ರೇಮಿಗಳಿಗೆ ಕಲ್ಲುಸಕ್ಕರೆಯನ್ನು ವಿತರಿಸಿ ಕನಾ೯ಟಕ ಎಂದು ರಾಜ್ಯಕ್ಕೆ ನಾಮಕರಣವಾದ ಸಂಭ್ರಮವನ್ನು ಸಿಹಿಯ ಮೂಲಕ ಹಂಚಲಾಯಿತು. ವೇದಿಕೆಯಲ್ಲಿದ್ದ ಗಣ್ಯರಿಗೂ ಹಾರ, ಹೂವು ನೀಡುವ ಬದಲಿಗೆ ಕಲ್ಲುಸಕ್ಕರೆಯನ್ನೇ ನೀಡುವ ಮೂಲಕ ಕನ್ನಡ ಹಬ್ಬದ ಸಿಹಿಯನ್ನು ಉಣಬಡಿಸಿದ್ದು ವಿಶೇಷವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News