ಛತ್ತೀಸ್ ಗಢ | ಭದ್ರತಾ ಪಡೆಗಳಿಂದ ನಾಲ್ವರು ನಕ್ಸಲರ ಹತ್ಯೆ, ಪೊಲೀಸ್ ಸಿಬ್ಬಂದಿ ಮೃತ್ಯು

Update: 2025-01-05 05:57 GMT

Photo | indiatoday.in

ರಾಯ್ಪುರ : ಛತ್ತೀಸ್ ಗಢದ ಅಬುಜ್ ಮದ್‌ ನಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ನಾಲ್ವರು ನಕ್ಸಲರನ್ನು ಹತ್ಯೆ ಮಾಡಲಾಗಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ನಾರಾಯಣಪುರ, ದಾಂತೇವಾಡ, ಜಗದಲ್ ಪುರ ಮತ್ತು ಕೊಂಡಗಾಂವ್ ಜಿಲ್ಲೆಗಳ ಪೊಲೀಸರ ‌ಜಂಟಿ ತಂಡ, ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ (ಎಸ್‌ ಟಿಎಫ್) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದವು.

ಗುಂಡಿನ ಚಕಮಕಿಯಲ್ಲಿ ಡಿಆರ್‌ ಜಿ ಸಿಬ್ಬಂದಿ ಸನ್ನು ಕರಮ್ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಂಟಿ ಕಾರ್ಯಾಚರಣೆ ವೇಳೆ ಎಕೆ-47 ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಟ್ಟ ಅರಣ್ಯದ ನಕ್ಸಲ್ ಕೋಟೆ ಅಬುಜ್ ಮದ್‌ ನಲ್ಲಿ ಭದ್ರತಾ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದರಿಂದ ನಿನ್ನೆ ಸಂಜೆಯಿಂದ ಗುಂಡಿನ ಚಕಮಕಿ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News