ಛತ್ತೀಸ್ ಗಡ ನೂತನ ಉಪ ಮುಖ್ಯಮಂತ್ರಿ ಟಿ.ಎಸ್. ದೇವ್ ಅವರಿಗೆ ಸಚಿನ್ ಪೈಲಟ್ ಅಭಿನಂದನೆ

Update: 2023-06-29 09:02 GMT

ಹೊಸದಿಲ್ಲಿ: ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪ್ರತಿಸ್ಪರ್ಧಿ ಟಿಎಸ್ ಸಿಂಗ್ ದೇವ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸುವ ಮೂಲಕ ಡಿಸೆಂಬರ್ ನಲ್ಲಿ ಛತ್ತೀಸ್ ಗಡದಲ್ಲಿ ನಡೆಯಲಿರುವ ಮತದಾನಕ್ಕಿಂತ ಮುಂಚಿತವಾಗಿ ಕಾಂಗ್ರೆಸ್ ಬಿಕ್ಕಟ್ಟು ಶಮನಕ್ಕೆ ಮುಂದಾಗಿದೆ. ಆದರೆ ಈ ಕ್ರಮವು ಇನ್ನೂ ಬಗೆಹರಿಯದ ರಾಜಸ್ಥಾನ ಬಿಕ್ಕಟ್ಟಿನತ್ತ ನೋಡುವಂತೆ ಮಾಡಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮೇಲಿನ ಒತ್ತಡವನ್ನು ಸರಾಗಗೊಳಿಸುವ ಸಲುವಾಗಿ ಹಾಗೂ ರಾಜಸ್ಥಾನ ಚುನಾವಣೆಗೆ ಮೊದಲು ಸಚಿನ್ ಪೈಲಟ್ ಗೆ ಪ್ರಮುಖ ಸ್ಥಾನ ನೀಡಬಹುದು ಎಂಬ ಊಹಾಪೋಹ ಕೇಳಿಬಂದಿದೆ.

ಸಚಿನ್ ಪೈಲಟ್ ಅವರು ಟಿಎಸ್ ಸಿಂಗ್ ದೇವ್ ಅವರಿಗೆ ಅಭಿನಂದನೆಗಳೊಂದಿಗೆ ಟ್ವೀಟ್ ಮಾಡಿದ್ದಾರೆ,

2021 ರಲ್ಲಿ ದೇವ್ ದಂಗೆ ಎದ್ದಾಗ ಗಾಂಧಿ ಕುಟುಂಬ ಮಧ್ಯಪ್ರವೇಶಿಸುವ ಮೂಲಕ ಸಮಸ್ಯೆ ಬಗೆಹರಿಸಿತ್ತು.

"ಛತ್ತೀಸ್ ಗಡದ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಕ್ಕಾಗಿ ಟಿಎಸ್ ಸಿಂಗ್ ದೇವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು "ಎಂದು ಪೈಲಟ್ ಟ್ವೀಟ್ ಮಾಡಿದ್ದಾರೆ.

ಛತ್ತೀಸ್ ಗಡದಲ್ಲಿ 70 ಕಾಂಗ್ರೆಸ್ ಶಾಸಕರಲ್ಲಿ 55 ಜನರ ಬೆಂಬಲದೊಂದಿಗೆ, ಭೂಪೇಶ್ ಬಘೇಲ್ ಅವರು ಮುಖ್ಯಮಂತ್ರಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News