ಟಿ20 ಕ್ರಿಕೆಟ್ | ಗರಿಷ್ಠ ವಿಕೆಟ್ ಪಡೆದ ಭಾರತದ 2ನೇ ಬೌಲರ್ ಅರ್ಷದೀಪ್
ಸೆಂಚೂರಿಯನ್ : ಅರ್ಷದೀಪ್ ಸಿಂಗ್ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದ ಭಾರತದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ 3ನೇ ಪಂದ್ಯದ ವೇಳೆ ಅರ್ಷದೀಪ್ ಈ ಸಾಧನೆ ಮಾಡಿದ್ದಾರೆ.
ಎಡಗೈ ವೇಗಿ ಅರ್ಷದೀಪ್, ರಯಾನ್ ರಿಕೆಲ್ಟನ್‌ರನ್ನು ಔಟ್ ಮಾಡಿ ಟಿ20 ಕ್ರಿಕೆಟ್‌ನಲ್ಲಿ 90 ವಿಕೆಟ್‌ಗಳನ್ನು ಪಡೆದಿದ್ದು, ಜಸ್‌ಪ್ರಿತ್ ಬುಮ್ರಾ(89 ವಿಕೆಟ್)ದಾಖಲೆಯನ್ನು ಮುರಿದಿದ್ದಾರೆ.
ಪ್ರಮುಖ ಆಟಗಾರರಾದ ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಜಾನ್ಸನ್ ವಿಕೆಟ್‌ಗಳನ್ನು ಉರುಳಿಸಿದ್ದ ಅರ್ಷದೀಪ್ ಅವರು ಭಾರತಕ್ಕೆ 11 ರನ್‌ಗಳ ರೋಚಕ ಜಯ ತಂದುಕೊಟ್ಟಿದ್ದಾರೆ. ಇದೀಗ ಒಟ್ಟು 92 ವಿಕೆಟ್‌ಗಳನ್ನು ಪಡೆದಿರುವ ಅರ್ಷದೀಪ್, ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಲು ಇನ್ನು ಕೇವಲ 5 ವಿಕೆಟ್‌ಗಳ ಅಗತ್ಯವಿದೆ. ಯಜುವೇಂದ್ರ ಚಹಾಲ್ 80 ಪಂದ್ಯಗಳಲ್ಲಿ 8.19ರ ಇಕಾನಮಿ ರೇಟ್‌ನಲ್ಲಿ 96 ವಿಕೆಟ್‌ಗಳನ್ನು ಪಡೆದು ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
►ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳು
1)ಯಜುವೇಂದ್ರ ಚಹಾಲ್-96
2)ಅರ್ಷದೀಪ್ ಸಿಂಗ್-92
3)ಭುವನೇಶ್ವರ್ ಕುಮಾರ್-90
4)ಜಸ್‌ಪ್ರಿತ್ ಬುಮ್ರಾ-89