ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ದುರಂತ: ಮಾರ್ಗ ಬದಲಾವಣೆ
ಬೆಂಗಳೂರು : ಚೆನ್ನೈ ವಿಭಾಗದ ಕವರಪ್ಪೆಟ್ಟೈ ರೈಲು ನಿಲ್ದಾಣದ ಬಳಿ ಮೈಸೂರು - ದರ್ಭಾಂಗ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಿನ ನಡುವೆ ಡಿಕ್ಕಿ ಆದ ಹಿನ್ನೆಲೆಯಲ್ಲಿ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ರೈಲು ಸಂಖ್ಯೆ 12296 ಡಣಾಪುರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಪ್ರಯಾಣವನ್ನು ಡಣಾಪುರದಿಂದ ಪ್ರಾರಂಭಿಸಲಾಗಿದೆ. ಈ ರೈಲನ್ನು ಗುಡೂರು, ರೇಣಿಗುಂಟಾ ಮತ್ತು ಮೇಲ್ಪಕ್ಕಂ ಮೂಲಕ ಓಡಿಸಲು ತಿರುಗಿಸಲಾಗಿದೆ. ತಿರುತ್ತಣಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ಪೆರಂಬೂರ್ ಮತ್ತು ಅರಕ್ಕೋಣಂ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 22353 ಪಾಟ್ನಾ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಪ್ರಯಾಣವನ್ನು ಪಾಟ್ನಾದಿಂದ ಪ್ರಾರಂಭಿಸಲಾಗಿದೆ. ಈ ರೈಲನ್ನು ಗುಡೂರು, ರೇಣಿಗುಂಟಾ ಮತ್ತು ಮೇಲ್ಪಾಕ್ಕಂ ಮೂಲಕ ಚಲಿಸುವಂತೆ ತಿರುಗಿಸಲಾಗಿದೆ. ತಿರುತ್ತಣಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ಪೆರಂಬೂರ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 22306 ಜಸಿದಿಹ್ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಪ್ರಯಾಣವನ್ನು ಜಸಿದಿಹ್‍ರಿಂದ ಪ್ರಾರಂಭಿಸಲಾಗಿದ್ದು, ಇದನ್ನು ಗುಡೂರು, ರೇಣಿಗುಂಟಾ ಮತ್ತು ಮೇಲ್ಪಕ್ಕಂ ಮೂಲಕ ಓಡಿಸಲು ತಿರುಗಿಸಲಾಗಿದೆ. ತಿರುತ್ತಣಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ಪೆರಂಬೂರ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮಂಜುನಾಥ್ ಕನಮಡಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.