ದಿಲ್ಲಿ ಕೋರ್ಟ್‌ನಿಂದ ಕೇಜ್ರಿವಾಲ್ ಕಸ್ಟಡಿ ಜುಲೈ 12ರ ವರೆಗೆ ವಿಸ್ತರಣೆ

Update: 2024-07-03 16:53 GMT

ಅರವಿಂದ ಕೇಜ್ರಿವಾಲ್ | PC : PTI 

ಹೊಸದಿಲ್ಲಿ : ಅಬಕಾರಿ ನೀತಿ ಹಗರಣದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ನೀಡಿದ್ದ ನ್ಯಾಯಾಂಗ ಬಂಧನವನ್ನು ಇಲ್ಲಿನ ನ್ಯಾಯಾಲಯ ಬುಧವಾರ ಜುಲೈ 12ರ ವರೆಗೆ ವಿಸ್ತರಿಸಿದೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ದಾಖಲಿಸಿದ ಪ್ರಕರಣದಲ್ಲಿ ಜುಲೈ 12ರ ವರೆಗೆ ಕಾರಾಗೃಹದಲ್ಲಿರುವ ಕೇಜ್ರಿವಾಲ್ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ವಿಶೇಷ ನ್ಯಾಯಾಧೀಶ ಕಾವೇರಿ ಬವೇಝಾ ಅವರ ನ್ಯಾಯಾಲಯದ ಮುಂದೆ ಹಾಜರಾದರು.

ಈ ನಡುವೆ ತನ್ನ ವೈದ್ಯಕೀಯ ತಪಾಸಣೆ ವೇಳೆ ಸಹಾಯಕಿಯಾಗಿ ಹಾಜರಿರಲು ಪತ್ನಿ ಸುನಿತಾ ಕೇಜ್ರಿವಾಲ್ ಅವರಿಗೆ ಅವಕಾಶ ನೀಡಬೇಕು ಎಂದು ಕೋರಿ ಕೇಜ್ರಿವಾಲ್ ಅವರು ಸಲ್ಲಿಸಿದ ಅರ್ಜಿಯ ಮೇಲಿನ ಆದೇಶವನ್ನು ನ್ಯಾಯಾಲಯ ಜೂನ್ 6ಕ್ಕೆ ಕಾಯ್ದಿರಿಸಿತು.

ವಿಚಾರಣೆಯ ಸಂದರ್ಭ ಮಾತನಾಡಲು ಅವಕಾಶ ನೀಡುವಂತೆ ಕೇಜ್ರಿವಾಲ್ ಅವರು ವಿನಂತಿಸಿದರು. ಆದರೆ, ನೀವು ಈಗಾಗಲೇ ನಿಮ್ಮ ವಕೀಲರ ಮೂಲಕ ವಾದ ಮಂಡಿಸಿದ್ದೀರಿ ಎಂದು ನ್ಯಾಯಾಲಯ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News