ಪುಣೆ ಅಪಘಾತ ಪ್ರಕರಣ: ರಸ್ತೆ ಸುರಕ್ಷತೆ ಬಗ್ಗೆ 300 ಶಬ್ದಗಳ ಪ್ರಬಂಧ ಬರೆದ ಹದಿಹರೆಯದ ಆರೋಪಿ!

Update: 2024-07-06 11:32 GMT
PC : PTI 

ಪುಣೆ: ಮೇ 29ರಂದು ಪೋರ್ಶೆ ಕಾರು ಚಾಲನೆ ಮಾಡಿ ಇಬ್ಬರು ಟೆಕ್ಕಿಗಳ ಮೇಲೆ ಹರಿಸಿದ ಆರೋಪ ಎದುರಿಸುತ್ತಿರುವ 17 ವರ್ಷದ ಅಪ್ರಾಪ್ತ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ್ದಾನೆ ಎಂದು ಯುವಕನ ವಕೀಲರು ಹೇಳಿದ್ದಾರೆ. ಬಾಲನ್ಯಾಯ ಮಂಡಳಿ ಈತನಿಗೆ ಜಾಮೀನು ಮಂಜೂರು ಮಾಡಲು ವಿಧಿಸಿದ್ದ ಷರತ್ತುಗಳಲ್ಲಿ ರಸ್ತೆ ಸುರಕ್ಷತೆ ಬಗೆಗೆ ಪ್ರಬಂಧ ಬರೆಯುವ ಷರತ್ತೂ ಸೇರಿತ್ತು.

"ಬಾಲಕ ಜಾಮೀನು ಷರತ್ತಿನ ಅನುಸಾರವಾಗಿ ರಸ್ತೆ ಸುರಕ್ಷತೆ ಬಗ್ಗೆ ಪ್ರಬಂಧ ಬರೆದು ಜೆಜೆಬಿ ಮುಂದೆ ಜುಲೈ 3ರಂದು ಪ್ರಸ್ತುತಪಡಿಸಿದ್ದಾನೆ" ಎಂದು ಹದಿಹರೆಯದ ಆರೋಪಿಯ ವಕೀಲರು ವಿವರಿಸಿದ್ದಾರೆ.

ಆದರೆ ಇಂಗ್ಲಿಷ್‍ನಲ್ಲಿ ಬರೆದ ಪ್ರಬಂಧದಲ್ಲಿ ಒಳಗೊಂಡ ಅಂಶಗಳ ಬಗ್ಗೆ ವಿವರ ನೀಡಲು ವಕೀಲರು ನಿರಾಕರಿಸಿದ್ದಾರೆ. ಪ್ರಕರಣ ಬಾಲನ್ಯಾಯ ಮಂಡಳಿಯ ಪ್ರಧಾನ ಮ್ಯಾಜಿಸ್ಟ್ರೇಟ್ ಅವರ ಮುಂದಿರುವುದರಿಂದ ಅಂಶಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News