ತ್ರಿಕೋನ ಪ್ರೇಮ ಪ್ರಕರಣ: ಕೊಲೆಯಲ್ಲಿ ಅಂತ್ಯ; ಆರೋಪಿಯ ಬಂಧನ

Update: 2024-02-07 05:29 GMT

ಆರೋಪಿ ಬಿಕಾಶ್

ಗುವಾಹತಿ: ತ್ರಿಕೋನ ಪ್ರೇಮ ಪ್ರಕರಣವೊಂದು, ಪಂಚತಾರಾ ಹೋಟೆಲ್ ನಲ್ಲಿ ಅಮಾನುಷ ಹತ್ಯೆಯಲ್ಲಿ ಕೊನೆಗೊಂಡ ಘಟನೆ ಗುವಾಹತಿಯಲ್ಲಿ ಸೋಮವಾರ ನಡೆ‌ದಿರುವ ಬಗ್ಗೆ ವರದಿಯಾಗಿದೆ. ಆದರೆ ಆರೋಪಿಗಳು ಕೊಲ್ಕತ್ತಾಗೆ ಹಾರುವ ಮುನ್ನವೇ ಪತ್ತೆ ಮಾಡಿ ಬಂಧಿಸಲಾಗಿದೆ.

ಗುವಾಹತಿ ವಿಮಾನ ನಿಲ್ದಾಣ ಬಳಿಯ ಅಝಾರಾ ಹೋಟೆಲ್ ನಲ್ಲಿ ಸೋಮವಾರ ಸಂಜೆ ಸುದೀಪ್ ಕುಮಾರ್ ಕಾಂಬ್ಳೆ (44) ಎಂಬ  ವ್ಯಕ್ತಿಯ ಶವ ಪತ್ತೆಯಾಗಿತ್ತು. ಆರೋಪಿ ಅಂಜಲಿ ಶಾ (25) ಮತ್ತು ಆಕೆಯ ಪ್ರಿಯಕರ ಬಿಕಾಶ್ ಕುಮಾರ ಶಾ (23) ಅಂದು ರಾತ್ರಿ ಕೊಲ್ಕತ್ತಾಗೆ ತೆರಳುವ ವಿಮಾನವನ್ನು ಏರುವ ಪ್ರಯತ್ನದಲ್ಲಿದ್ದಾಗ ಪೊಲೀಸರು ವಿಮಾನ ನಿಲ್ದಾಣದಿಂದ ಇಬ್ಬರನ್ನೂ ಬಂಧಿಸಿದರು.

ಪುಣೆಯ ಕಾರ್ ಡೀಲರ್ ಆಗಿರುವ ಕಾಂಬ್ಳೆ, ಹೋಟೆಲ್ ರೂಂನಲ್ಲಿ ನೆಲದ ಮೇಲೆ ಬಿದ್ದು, ಅವರ ಮೂಗಿನಿಂದ ರಕ್ತ ಬರುತ್ತಿದ್ದುದನ್ನು ಹೋಟೆಲ್ ಸಿಬ್ಬಂದಿ ನೋಡಿದ್ದಾರೆ. ಕೊಲ್ಕತ್ತಾ ವಿಮಾನ ನಿಲ್ದಾಣದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ, ಕಳೆದ ವರ್ಷ ವಿಮಾನ ನಿಲ್ದಾಣದಲ್ಲಿ ಪರಿಚಯವಾದ ಕಾಂಬ್ಳೆ ಜತೆ ಪ್ರೇಮ ಸಂಬಂಧ ಹೊಂದಿದ್ದಳು. ಆದರೆ ಈಗಾಗಲೇ ಬಿಕಾಶ್ ಎಂಬಾತನ ಜತೆ ಪ್ರೇಮಸಂಬಂಧ ಹೊಂದಿದ್ದ ಅಂಜಲಿಯನ್ನು ವಿವಾಹವಾಗುವಂತೆ ಬಿಕಾಶ್  ಕೇಳುತ್ತಿದ್ದ. ಇದೇ ವೇಳೆ ಕಾಂಬ್ಳೆ ಹಾಗೂ ಅಂಜಲಿ ಅನ್ಯೋನ್ಯವಾಗಿರುವ ಚಿತ್ರಗಳು ಆಕೆಯ ಫೋನ್ ನಲ್ಲಿ ಕಂಡುಬಂದಾಗ ಸಮಸ್ಯೆ ಉಲ್ಬಣಿಸಿದೆ ಎಂದು ಅಂಜಲಿ ವಿಚಾರಣೆ ವೇಳೆ ಹೇಳಿದ್ದಾಳೆ.

ಈ ಫೋಟೊ ವಿಚಾರದಲ್ಲಿ ಅಂಜಲಿ-ಬಿಕಾಶ್ ಜೋಡಿ ಕಾಂಬ್ಳೆ ವಿರುದ್ಧ ಜಗಳ ಮಾಡಲು ಯೋಚಿಸಿತು. ಎಲ್ಲರೂ ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸೇರಲು ಯೋಜಿಸಿದ್ದರು. ಆದರೆ ಕಾಂಬ್ಳೆ ಅದನ್ನು ಗುವಾಹತಿಗೆ ಸ್ಥಳಾಂತರಿಸಿ, ಪಂಚತಾರಾ ಹೋಟೆಲ್ನ ನಲ್ಲಿ ಕೊಠಡಿ ಕಾಯ್ದಿರಿಸಿದರು.

ಇಬ್ಬರೂ ಗುಹವಾತಿಗೆ ಜತೆಯಾಗಿ ವಿಮಾನದಲ್ಲಿ ತೆರಳಿದರೂ, ಬೇರೆ ಬೇರೆಯಾಗಿ ಹೋಟೆಲ್ ತಲುಪಿದರು. ಬಿಕಾಶ್ ತನಗೆ ಅದೇ ಹೋಟೆಲ್ ನಲ್ಲಿ ಕಾಂಬ್ಳೆಗೆ ಗೊತ್ತಾಗದಂತೆ ಪ್ರತ್ಯೇಕ ರೂಮ್ ಕಾಯ್ದಿರಿಸಿದ್ದ. ಅಂಜಲಿ ಹಾಗೂ ಕಾಂಬ್ಳೆ ಜತೆಯಾಗಿ ಹೋಟೆಲ್ ಗೆ ಬಂದಿದ್ದು, ಬಿಕಾಶ್ ಪ್ರತ್ಯೇಕವಾಗಿ ಆಗಮಿಸಿದ್ದ. ಬಿಕಾಶ್ ಆಗಮನ ಕಾಂಬ್ಳೆಯನ್ನು ಕೆರಳಿಸಿದ್ದು, ಇಬ್ಬರ ನಡುವೆ ಜಗಳವಾಗಿದೆ. ‌ ಕಾಂಬ್ಳೆ ಗಾಯಗೊಂಡ ಸಂದರ್ಭದಲ್ಲಿ ಈ ಜೋಡಿ ಪಲಾಯನ ಮಾಡಿದೆ. ಅನ್ಯೋನ್ಯವಾಗಿದ್ದ ಚಿತ್ರ ಹೊಂದಿದ್ದ‌ ಕಾಂಬ್ಳೆಗೆ ಸೇರಿದ ಎರಡು ಮೊಬೈಲ್ ಗಳನ್ನು ತಮ್ಮ ಜತೆ ಕೊಂಡೊಯ್ದಿದ್ದರು. 

ಈ ವೇಳೆ  ಅನುಮಾನಗೊಂಡ ಹೋಟೆಲ್ ಸಿಬ್ಬಂದಿ  ಪೊಲೀಸರಿಗೆ ಮಾಹಿತಿ ನೀಡಿದರು. ಹೋಟೆಲ್ ನೋಂದಣಿ ಮತ್ತು ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ದಿಢೀರ್ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News