ಆರೆಸ್ಸೆಸ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶಾಸಕನನ್ನು ಪಕ್ಷದ ಪ್ರಮುಖ ಹುದ್ದೆಯಿಂದ ಕೈಬಿಟ್ಟ ಎಐಎಡಿಎಂಕೆ

Update: 2024-10-09 06:01 GMT

ಎನ್ ತಲವೈ ಸುಂದರಂ (Photo:X/@ThalavaiSundar4)

ಚೆನ್ನೈ: ಆರೆಸ್ಸೆಸ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಐಎಡಿಎಂಕೆ ಶಾಸಕ, ಮಾಜಿ ಸಚಿವ ಎನ್ ತಲವೈ ಸುಂದರಂ ಅವರನ್ನು ಪಕ್ಷದ ಪದಾಧಿಕಾರಿ ಹುದ್ದೆಯಿಂದ ತಾತ್ಕಾಲಿಕವಾಗಿ ಕೈಬಿಡಲಾಗಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕನ್ಯಾಕುಮಾರಿ ಶಾಸಕ ಮತ್ತು ಜಯಲಲಿತಾ ಸಂಪುಟದಲ್ಲಿ ಈ ಹಿಂದೆ ಸಚಿವರಾಗಿದ್ದ ತಲವೈ ಸುಂದರಂ ಅವರನ್ನು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡ ಕಾರಣ ಅವರನ್ನು ಪಕ್ಷದ ಎಐಎಡಿಎಂಕೆಯ ಕನ್ಯಾಕುಮಾರಿ ಜಿಲ್ಲಾ ಘಟಕದ ಕಾರ್ಯದರ್ಶಿ ಮತ್ತು ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಕೈ ಬಿಡಲಾಗಿದೆ ಎಂದು ಹೇಳಿದ್ದಾರೆ.

ತಲವೈ ಸುಂದರಂ ಅವರು ಎಐಎಡಿಎಂಕೆಯ ಹಿರಿಯ ನಾಯಕರಾಗಿದ್ದರು. ಶಾಸಕ, ಸಚಿವ, ರಾಜ್ಯಸಭಾ ಸಂಸದರಾಗಿದ್ದ ಇವರು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಕನ್ಯಾಕುಮಾರಿ ಜಿಲ್ಲೆಯಲ್ಲಿ ಈ ಬಾರಿ ಆಯ್ಕೆಯಾಗಿದ್ದ ಎಐಎಡಿಎಂಕೆಯ ಏಕೈಕ ಶಾಸಕರಾಗಿದ್ದಾರೆ.

ಆರೆಸ್ಸೆಸ್ ಸ್ಥಾಪನೆಯ 100ನೇ ವರ್ಷದ ಅಂಗವಾಗಿ ಕನ್ಯಾಕುಮಾರಿಯಲ್ಲಿ ಆರೆಸ್ಸೆಸ್ ಆಯೋಜಿಸಿದ್ದ ಮೆರವಣಿಗೆಗೆ ತಲವೈ ಸುಂದರಂ ಚಾಲನೆ ನೀಡಿದ್ದರು, ಇದು ವ್ಯಾಪಕವಾಗಿ ಟೀಕೆಗೆ ಕಾರಣವಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News