ಬಿಹಾರ: ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮೊಟ್ಟೆ ವ್ಯಾಪಾರಿಯ ಪುತ್ರ

Update: 2024-12-01 05:18 GMT

PC | indiatoday.in

ಪಾಟ್ನಾ: ಬಿಹಾರದಲ್ಲಿ ಮೊಟ್ಟೆ ವ್ಯಾಪಾರಿಯೋರ್ವನ ಪುತ್ರ ಬಡತನವನ್ನು ಮೆಟ್ಟಿ ನಿಂತು ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಔರಂಗಾಬಾದ್‌ ನ ಶಿವಗಂಜ್ ಮೂಲದ ವಿಜಯ್ ಸಾ ಅವರ ಪುತ್ರ ಆದರ್ಶ ಕುಮಾರ್ ಬಿಪಿಎಸ್ಸಿ 32ನೇ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜಯ್ ಸಾ ಶಿವಗಂಜ್ ಮಾರುಕಟ್ಟೆಯಲ್ಲಿ ತಳ್ಳು ಗಾಡಿಯಲ್ಲಿ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಮನೆಯಲ್ಲಿ ಕಡು ಬಡತನವಿದ್ದರೂ ವಿಜಯ್ ತನ್ನ ಮಕ್ಕಳ ಶಿಕ್ಷಣದ ಮೇಲೆ ಯಾವುದೇ ಪರಿಣಾಮವನ್ನು ಬೀರದಂತೆ ನೋಡಿಕೊಂಡಿದ್ದಾರೆ. ವಿಜಯ್ ಪತ್ನಿ ಸುನಯನಾ ಸ್ವಸಹಾಯ ಸಂಘದಿಂದ ಸಾಲ ಪಡೆದು ತಮ್ಮ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ನೆರವಾಗಿದ್ದಾರೆ.

ಆದರ್ಶ ಕುಮಾರ್ ಪಾಟ್ನಾದ ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳ BA LLB ಪದವಿಯನ್ನು ಪಡೆದುಕೊಂಡಿದ್ದು, ಇದೀಗ BPSC ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.

ಜಡ್ಜ್ ಪರೀಕ್ಷೆಯಲ್ಲಿ ತೇರ್ಗಡೆ ಬಳಿಕ ಮಾತನಾಡಿದ ಆದರ್ಶ ಕುಮಾರ್, ನನ್ನ ಯಶಸ್ಸಿನ ಶ್ರೇಯಸ್ಸು ತಂದೆ-ತಾಯಿಗೆ ಸಲ್ಲುತ್ತದೆ. ನಾನು ನನ್ನ ಹೆತ್ತವರಿಗೆ ಯಾವುಗಲೂ ಚಿರ ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News