ʼಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ʼ ಘೋಷಣೆ ಕೈಬಿಡಿ ಎಂದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ

Update: 2024-07-17 16:17 IST
ʼಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ʼ ಘೋಷಣೆ ಕೈಬಿಡಿ ಎಂದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ

 ಸುವೇಂದು | PC : PTI  

  • whatsapp icon

ಕೊಲ್ಕತ್ತಾ: ಬಿಜೆಪಿ ತನ್ನ “ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್” ಘೋಷಣೆಯನ್ನು ಕೈಬಿಡಬೇಕೆಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕರೆ ನೀಡಿದ್ದಾರೆ.

ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿ ಜೈ ಶ್ರೀ ರಾಮ್‌ ಘೋಷಣೆ ಮೊಳಗಿಸಿದ ಸುವೇಂದು “ನಾವು ಗೆದ್ದು ಹಿಂದೂಗಳನ್ನು ರಕ್ಷಿಸುತ್ತೇವೆ. ನಮ್ಮೊಂದಿಗೆ ಇರುವವರು ನಮ್ಮೊಂದಿಗೆ ಇರುತ್ತಾರೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ನಿಲ್ಲಿಸಿ. ಅಲ್ಪಸಂಖ್ಯಾತ ಮೋರ್ಚಾದ ಅಗತ್ಯವಿಲ್ಲ. ಅದನ್ನು ನಿಲ್ಲಿಸಿ. ನಾವು ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆ,” ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಘೋಷ ವಾಕ್ಯ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಆಗಿರುವಂತಹ ಸಂದರ್ಭದಲ್ಲಿ ಸುವೇಂದು ಅಧಿಕಾರಿ ಮೇಳಿನಂತೆ ಕರೆ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News