ಸಿಐಎಸ್‌ಎಫ್‌ ನ ಪ್ರಪ್ರಥಮ ಸರ್ವಮಹಿಳಾ ಬೆಟಾಲಿಯನ್‌ ಗೆ ಕೇಂದ್ರದ ಅಸ್ತು

Update: 2024-11-12 17:22 GMT

PC : livemint.com

ಹೊಸದಿಲ್ಲಿ : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಪ್ರಪ್ರಥಮ ಸರ್ವ ಮಹಿಳಾ ಬೆಟಾಲಿಯನ್‌ನ ಸ್ಥಾಪನೆಯನ್ನು ಕೇಂದ್ರ ಸರಕಾರವು ಮಂಗಳವಾರ ಘೋಷಿಸಿದೆ. ಈ ಬೆಟಾಲಿಯನ್ 1 ಸಾವಿರಕ್ಕೂ ಅಧಿಕ ಮಹಿಳಾ ಸಿಐಎಸ್‌ಎಫ್ ಯೋಧರನ್ನು ಇದು ಒಳಗೊಂಡಿರುವುದು. ವಿಮಾನ ನಿಲ್ದಾಣಗಳು ಮತ್ತಿತರ ಆಯಕಟ್ಟಿನ ಹಾಗೂ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥಾಪನೆಗಳಲ್ಲಿ ಪಡೆಗಳ ಕಾರ್ಯಬಾಹುಳ್ಯವು ಅಧಿಕವಾಗುತ್ತಿರು ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಈ ನಿರ್ಧಾರವನ್ನು ಕೈಗೊಂಡಿದೆ.

ವಿಮಾನ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು ಹಾಗೂ ರಾಷ್ಟ್ರೀಯ ಸ್ಮಾರಕಗಳು ಸೇರಿದಂತೆ ಪ್ರಮುಖ ಸಂಸ್ಥಾಪನೆಗಳಲ್ಲಿ ಭದ್ರತಾ ನಿರ್ವಹಣೆಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಅವಶ್ಯಕತೆ ಹೆಚ್ಚುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.

ನೂತನವಾಗಿ ಅನುಮತಿಸಲ್ಪಟ್ಟ ಸರ್ವ ಮಹಿಳಾ ಮೀಸಲು ಬೆಟಾಲಿಯನ್ 1025 ಸಿಬ್ಬಂದಿಯನ್ನು ಹೊಂದಿರಲಿದೆ. ಇವೆರಲ್ಲರನ್ನೂ ಈಗಿರುವ 2 ಲಕ್ಷ ಸಂಖ್ಯಾಬಲದ ಸಿಐಎಸ್‌ಎಫ್ ಸಿಬ್ಬಂದಿಯಿಂದಲೇ ಆಯ್ಕೆ ಮಾಡಲಾಗುವುದು. ಹಿರಿಯ ಕಮಾಂಡೆಂಟ್ ದರ್ಜೆಯ ಅಧಿಕಾರಿಯೊಬ್ಬರು ಈ ಬೆಟಾಲಿಯನ್‌ ನ ನೇತೃತ್ವ ವಹಿಸಲಿದ್ದಾರೆ. ಈ ಬೆಟಾಲಿಯನ್‌ನ ಸಿಬ್ಬಂದಿಯು ದೇಶಾದ್ಯಂತದ ಸೂಕ್ಷ್ಮ ಸಂವೇದಿ ಸಂಸ್ಥಾಪನೆಗಳಲ್ಲಿ ವಿವಿಧ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ’’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ಸಿಐಎಸ್‌ಎಫ್ ದೇಶಾದ್ಯಂತ 12 ಮೀಸಲು ಬೆಟಾಲಿಯನ್‌ ಗಳನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News