ಚಂದ್ರಯಾನ-3: ವಿಕ್ರಮ್ ಲ್ಯಾಂಡರ್ ಕಳುಹಿಸಿದ ಮೊದಲ ಚಿತ್ರವನ್ನು ಬಿಡುಗಡೆಗೊಳಿಸಿದ ಇಸ್ರೋ

Update: 2023-08-23 18:00 GMT

ಬೆಂಗಳೂರು: ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್ ಆದ ಬಳಿಕ, ವಿಕ್ರಮ್ ಲ್ಯಾಂಡರ್ ತೆಗೆದ ಮೊದಲ ಫೋಟೋವನ್ನು ಇಸ್ರೋ ಬಿಡುಗಡೆ ಮಾಡಿದೆ. ಚಂದ್ರಯಾನದ ಲ್ಯಾಂಡಿಂಗ್ ಪ್ರದೇಶದ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.

ಚಂದ್ರಯಾನ 3 ಲ್ಯಾಂಡರ್ ಜೊತೆ ಬೆಂಗಳೂರಿನ MOX-ISTRAC ಸಂಪರ್ಕವನ್ನು ಸಾಧಿಸಿದ್ದು, ಕೆಲವು ಚಿತ್ರಗಳನ್ನು ಹಂಚಿಕೊಂಡಿದೆ ಎಂದು ವಿಕ್ರಮ್ ಲ್ಯಾಂಡರ್ ಇಳಿಯುವಾಗ ತೆಗೆದ ಪೋಟೋಗಳನ್ನೂ ಇಸ್ರೋ ಟ್ವೀಟ್ ಮಾಡಿದೆ.

ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮರಾದಿಂದ ತೆಗೆದ ಚಿತ್ರಗಳು ಇಲ್ಲಿವೆ ಎಂದು ಕೆಲವು ಚಿತ್ರಗಳನ್ನು ಇಸ್ರೋ ಹಂಚಿಕೊಂಡಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News