ಚುನಾವಣಾ ಬಾಂಡ್: ಬಂಗಾಳದ 50 ಕಂಪನಿಗಳಿಂದ 1,600 ಕೋಟಿ ದೇಣಿಗೆ

Update: 2024-03-16 03:40 GMT

Photo:TOI

ಕೊಲ್ಕತ್ತಾ: ಬಂಗಾಳದ ಕಾರ್ಪೊರೇಟ್ ಕಂಪನಿಗಳು ಚುನಾವಣಾ ಬಾಂಡ್ ಮೂಕ ವಿವಿಧ ರಾಜಕೀಯ ಪಕ್ಷಗಳಿಗೆ 1600 ಕೋಟಿ ರೂಪಾಯಿ ದೇಣಿಗೆ ನೀಡಿವೆ. ಎಸ್ ಬಿಐ ಪ್ರಕಟಿಸಿದ ಮಾಹಿತಿಯ ಪ್ರಕಾರ, ರಾಜ್ಯದ 25ಕ್ಕೂ ಹೆಚ್ಚು ಕಾರ್ಪೊರೇಟ್ ಸಮೂಹಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ. ಹಲವು ಮಂದಿ ವೈಯಕ್ತಿಕವಾಗಿ ಕೂಡಾ ರಾಜ್ಯದಿಂದ ದೇಣಿಗೆ ನೀಡಿದ್ದಾರೆ.

ಸಂಜಯ್ ಗೊಯಂಕಾ ಗ್ರೂಪ್, ಐಟಿಸಿ, ಕೆವೆಂಟರ್ ಗ್ರೂಪ್, ರುಂಗ್ಟಾ ಗ್ರೂಪ್, ರಶ್ಮಿ ಗ್ರೂಪ್, ಅಂಬುಜಾ, ಶ್ಯಾಮ್ ಸ್ಟೀಲ್, ಐಎಫ್ ಬಿ ಗ್ರೂಪ್, ರಿಪ್ಲೇ, ಶ್ರೀ ಸಿಮೆಂಟ್, ಧುನ್ಸೇರಿ ಗ್ರೂಪ್, ಉತ್ಕರ್ಷ್ ಗ್ರೂಪ್, ಸ್ಟಾರ್ ಸಿಮೆಂಟ್, ಡಬ್ಲ್ಯುಪಿಐಎಲ್, ತೇಗಾ ಇಂಡಸ್ಟ್ರೀಸ್, ಅಕ್ರೋಪೊಲೀಸ್ ಮೈಂಟನೆನ್ಸ್, ಎಸ್ ಕೆಪಿ ಮರ್ಚೆಂಟ್ಸ್ ಮತ್ತು ಆಸ್ಟಿನ್ ಪ್ಲೈವುಡ್ಸ್ ದೇಣಿಗೆ ನೀಡಿದ ಪ್ರಮುಖ ಕಂಪನಿಗಳು.

ಬಂಗಾಳದಿಂದ ಅತಿಹೆಚ್ಚು ದೇಣಿಗೆ ನೀಡಿದ ಕಂಪನಿಯೆಂದರೆ ಕೆವೆಂಟರ್ ಗ್ರೂಪ್. ಈ ಸಮೂಹ ಸುಮಾರು 600 ಕೋಟಿ ರೂಪಾಯಿಗಳ ದೇಣಿಗೆ ನೀಡಿದೆ. ಸಮೂಹದ ಮದನ್ಲಾಲ್ ಲಿಮಿಟೆಡ್, ಎಂಕೆಜೆ ಎಂಟರ್ಪ್ರೈಸಸ್ ಮತ್ತು ಕೆವೆಂಟರ್ ಫುಡ್ಪಾರ್ಕ್ ದೇಣಿಗೆ ನೀಡಿವೆ. ನಂತರದ ಸ್ತಾನದಲ್ಲಿ ಆರ್.ಪಿ.ಸಂಜಯ್ ಗೋಯಂಕಾ ಗ್ರೂಪ್ ಇದ್ದು, ಸುಮಾರು 500 ಕೋಟಿ ರೂಪಾಯಿ ದೇಣಿಗೆಯನ್ನು ಹಲ್ದಿಯಾ ಎನರ್ಜಿ, ಧರಿವಾಲ್ ಇನ್ಫ್ರಾಸ್ಟ್ರಕ್ಚರ್ ಮತ್ತು ಫಿಲಿಪ್ಸ್ ಕಾರ್ಬನ್ ಬ್ಲಾಕ್ ಮೂಲಕ ನೀಡಿದೆ.

ಮೂರನೇ ಸ್ಥಾನದಲ್ಲಿರುವ ರುಂಗ್ಟಾ ಸನ್ಸ್ 100 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಇದು ಗಣಿಗಾರಿಕೆ ಮತ್ತು ಉಕ್ಕು ಉದ್ಯಮದಲ್ಲಿ ಅತ್ಯಂತ ಹಳೆಯ ಖಾಸಗಿ ಕಂಪನಿಯಾಗಿದೆ. ಬಿಜನ್ ಭೂಷಣ್ನಾಗ್ ಇತ್ತೀಚೆಗೆ ಆರಂಭಿಸಿದ ಐಎಫ್ ಬಿ ಗ್ರೂಪ್ 92 ಕೋಟಿ ರೂಪಾಯಿಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಎಲೆಕ್ಟ್ರಾನಿಕ್ಸ್ ಹಾಗೂ ಆಹಾರ ಸಂಸ್ಕರಣೆ, ಮದ್ಯ ಉದ್ಯಮದಲ್ಲಿ ಇದು ತೊಡಗಿಸಿಕೊಂಡಿದೆ.

2023-24ನೇ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಈ ಕಂಪನಿ 40 ಕೋಟಿ ರೂಪಾಯಿಗಳನ್ನು ಚುನಾವಣಾ ಬಾಂಡ್ ಮೂಲಕ ಪಾವತಿಸಿದ್ದಾಗಿ ಪ್ರಕಟಿಸಿದೆ. ಇದು ಕಂಪನಿ ಈ ಅವಧಿಯಲ್ಲಿ ಗಳಿಸಿದ ಒಟ್ಟು ಲಾಭವಾದ 13.9 ಕೋಟಿ ರೂಪಾಯಿಯ ಮೂರು ಪಟ್ಟು ಅಧಿಕ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News