ಚುನಾವಣಾ ಬಾಂಡ್‌ ಮಾಹಿತಿ ಬಹಿರಂಗ: ಲಕ್ಷ ಕೋಟಿ ರೂ. ಮೌಲ್ಯಗಳ ಯೋಜನೆ ಗುತ್ತಿಗೆ ಪಡೆದ ಕಂಪೆನಿಯಿಂದ ಎರಡನೇ ಗರಿಷ್ಠ ದೇಣಿಗೆ

Update: 2024-03-15 05:51 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಚುನಾವಣಾ ಆಯೋಗ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ ಚುನಾವಣಾ ಬಾಂಡ್‍ಗಳ ಮಾಹಿತಿಯ ಪ್ರಕಾರ, 966 ಕೋಟಿ ರೂಪಾಯಿ ಮೌಲ್ಯದ ಚುಣಾವಣಾ ಬಾಂಡ್‍ಗಳನ್ನು ಖರೀದಿಸಿದ ಮೇಘಾ ಇಂಜಿನಿಯರಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎರಡನೇ ಗರಿಷ್ಠ ದೇಣಿಗೆ ನೀಡಿದ ಕಂಪನಿ ಎನಿಸಿಕೊಂಡಿದೆ.

ಈ ಕಂಪನಿ ತಲಾ ಒಂದು ಕೋಟಿ ರೂಪಾಯಿ ಮೌಲ್ಯದ 966 ಬಾಂಡ್‍ಗಳನ್ನು ಖರೀದಿಸಿದೆ. ಹೈದರಾಬಾದ್ ಮೂಲದ ಈ ಕಂಪನಿ ಹಲವು ಸರ್ಕಾರಿ ಯೋಜನೆಗಳ ಗುತ್ತಿಗೆ ಪಡೆದಿದ್ದು, ಇದರಲ್ಲಿ 1.15 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೆಲಂಗಾಣ ಕಾಳೇಶ್ವರಂ ಏತ ನೀರಾವರಿ ಯೋಜನೆ, 14 ಸಾವಿರ ಕೋಟಿ ರೂಪಾಯಿ ಮೌಲ್ಯದ ಥಾಣೆ- ಬೊರಿವಿಲಿ ಅವಳಿ ಸುರಂಗ ಮಾರ್ಗ ಯೋಜನೆ ಪ್ರಮುಖವಾದವು.

ಅಂತೆಯೇ 220 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‍ಗಳನ್ನು ಖರೀದಿಸಿದ ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‍ಮಿಷನ್ ಕಂಪನಿ ಲಿಮಿಟೆಡ್, 2022-23ರಲ್ಲಿ ಪ್ರುಡೆಂಟ್ ಎಲೆಕ್ಟ್ರೊರಲ್ ಟ್ರಸ್ಟ್ ಗೆ 83 ಕೋಟಿ ರೂಪಾಯಿಯನ್ನು ನೀಡಿದೆ. ಈ ಟ್ರಸ್ಟ್ ರಾಜಕೀಯ ಪಕ್ಷಗಳಿಗೆ ಹಣವನ್ನು ವಿತರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News