ಗ್ರೇಟರ್ ನೋಯ್ಡಾದ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಅಗ್ನಿ ಅವಘಡ: ಮೂರನೇ ಮಹಡಿಯಿಂದ ಜಿಗಿದ ಜನರು

Update: 2023-07-13 09:21 GMT

ಸಾಂದರ್ಭಿಕ ಚಿತ್ರ, PTI

ನೋಯ್ಡಾ: ಗ್ರೇಟರ್ ನೋಯ್ಡಾದ ಗ್ಯಾಲಕ್ಸಿ ಪ್ಲಾಝಾ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕೆಲವು ಜನರು ಜೀವವನ್ನು ಉಳಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದಿದ್ದಾರೆ ಎಂದು NDTV ವರದಿ ಮಾಡಿದೆ.

ಮಾಲ್ ನ ಕಿಟಿಕಿಯಲ್ಲಿ ನೇತಾಡುತ್ತಿದ್ದವರನ್ನು ಜಂಪ್ ಮಾಡು ಎಂದು ಕೆಲವರು ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಬಂದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಜನರು ಮೂರನೇ ಮಹಡಿಯ ಕಿಟಕಿಗಳಿಂದ ನೇತಾಡುತ್ತಿರುವುದು,ಬೆಂಕಿ ಮತ್ತು ಹೊಗೆ ಹೆಚ್ಚುತ್ತಿದ್ದಂತೆ ಜಿಗಿಯುತ್ತಿರುವ ದೃಶ್ಯಗಳು ಕಂಡುಬಂದಿದೆ

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News