'ಇಂಡಿಯಾ' ಮೈತ್ರಿಕೂಟದಿಂದ ಮಧ್ಯಪ್ರದೇಶದಲ್ಲಿ ಮೊದಲ ಜಂಟಿ ಸಾರ್ವಜನಿಕ ರ‍್ಯಾಲಿ

Update: 2023-09-14 06:20 GMT

Photo: Twitter@NDTV

ಭೋಪಾಲ್: ಹಲವಾರು ಸಭೆಗಳ ನಂತರ INDIA ಮೈತ್ರಿಕೂಟವು ಮಧ್ಯಪ್ರದೇಶದಲ್ಲಿ ತನ್ನ ಮೊದಲ ಜಂಟಿ ಸಾರ್ವಜನಿಕ ರ‍್ಯಾಲಿಯನ್ನು ನಡೆಸಲು ನಿರ್ಧರಿಸಿದೆ.

ಎರಡು ಡಝನ್‌ಗಿಂತಲೂ ಹೆಚ್ಚು ಪಕ್ಷಗಳನ್ನು ಒಳಗೊಂಡಿರುವ ವಿರೋಧ ಪಕ್ಷದ ಮೈತ್ರಿಕೂಟಯು ಅಕ್ಟೋಬರ್ ಮೊದಲ ವಾರದಲ್ಲಿ ಚುನಾವಣೆಗೆ ಒಳಪಡುವ ರಾಜ್ಯದಲ್ಲಿ ಬೆಂಬಲವನ್ನು ಕ್ರೋಡೀಕರಿಸಲಿದೆ ಎಂದು ಡಿಎಂಕೆ ಮುಖಂಡ ಟಿ.ಆರ್.ಬಾಲು ಖಚಿತಪಡಿಸಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಾಗೂ 2024 ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ಮಾತುಕತೆಯನ್ನು ಮೈತ್ರಿಕೂಟವು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಡಿಎಂಕೆ ನಾಯಕ ಹೇಳಿದರು.

"ನಾವು ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆ ವ್ಯವಸ್ಥೆ ಮತ್ತು ಚರ್ಚೆಗೆ ಹೋಗಲು ನಿರ್ಧರಿಸಿದ್ದೇವೆ. ತಕ್ಷಣವೇ ವಿಧಾನಸಭಾ ಚುನಾವಣೆಗಳು ನಡೆಯುವ ರಾಜ್ಯಗಳಿಗೆ ಆದ್ಯತೆ ನೀಡಲಾಗುವುದು. ಮೊದಲ ರ್ಯಾಲಿಯನ್ನು ಭೋಪಾಲ್‌ನಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ನಡೆಸಲಾಗುವುದು" ಎಂದು . ಬಾಲು ಹೇಳಿದರು.

12 ಸದಸ್ಯ ಪಕ್ಷಗಳು ಭಾಗವಹಿಸಿದ್ದ ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿಯ ಮೊದಲ ಸಭೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ನಡೆಯಿತು. ತೃಣಮೂಲ ಕಾಂಗ್ರೆಸ್ ಗೈರುಹಾಜರಿಯಾಗಿದ್ದು, ಆ ಪಕ್ಷದ ಲೋಕಸಭೆಯ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಜಾರಿ ನಿರ್ದೇಶನಾಲಯವು ಬುಧವಾರವೇ ವಿಚಾರಣೆಗೆ ಕರೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News