ಮೊದಲು ಎಲ್ಲಾ ಜಾತಿಗಳನ್ನು ಹಿಂದೂ ಧರ್ಮದಡಿಗೆ ತರಲು ಸಮಾನ ನಾಗರಿಕ ಸಂಹಿತೆ ರೂಪಿಸಿ: ತಮಿಳುನಾಡು ದಲಿತ ಮುಖಂಡ
ಯುಸಿಸಿ ಕುರಿತು ಪ್ರತಿಕ್ರಿಯೆಗಳನ್ನು ಆಹ್ವಾನಿಸಿದ್ದ ಕಾನೂನು ಆಯೋಗಕ್ಕೆ ಬರೆದ ವಿವರವಾದ ಪತ್ರದಲ್ಲಿ ವಿಸಿಕೆ ಮುಖ್ಯಸ್ಥ ಈ ಉಲ್ಲೇಖ ಮಾಡಿದ್ದಾರೆ.
ಚೆನ್ನೈ: ದೇಶದಾದ್ಯಂತ ಎಲ್ಲಾ ಧರ್ಮಗಳಿಗೆ ಸಮಾನ ನಾಗರಿಕ ಸಂಹಿತೆಯನ್ನು ತರುವ ಮೊದಲು ಹಿಂದೂ ಧರ್ಮದಡಿಯಲ್ಲಿ ಎಲ್ಲಾ ಜಾತಿಗಳಿಗೆ ಮೊದಲು ಸರಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕಾಗಿದೆ ಎಂದು ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಸಂಸದ ಮತ್ತು ಪ್ರಮುಖ ದಲಿತ ನಾಯಕ ತೊಳ್ ತಿರುಮಾವಳವನ್ ಅವರು ಹೇಳಿಕೆ ನೀಡಿದ್ದಾರೆ.
ಯುಸಿಸಿ ಕುರಿತು ಪ್ರತಿಕ್ರಿಯೆಗಳನ್ನು ಆಹ್ವಾನಿಸಿದ್ದ ಕಾನೂನು ಆಯೋಗಕ್ಕೆ ಬರೆದ ವಿವರವಾದ ಪತ್ರದಲ್ಲಿ ವಿಸಿಕೆ ಮುಖ್ಯಸ್ಥ ಈ ಉಲ್ಲೇಖ ಮಾಡಿದ್ದಾರೆ. "ಹಿಂದೂ ಧರ್ಮದ ಪ್ರಮುಖ ಆಚರಣೆಗಳನ್ನು ಹೇರುವ ಮೂಲಕ ಇದು ಅಲ್ಪಸಂಖ್ಯಾತ ಧರ್ಮಗಳ ಧಾರ್ಮಿಕ ಪದ್ಧತಿ ಮತ್ತು ಆಚರಣೆಗಳಿಗೆ ಸವಾಲೊಡ್ಡುತ್ತದೆ" ಎಂದು ಅವರು ಹೇಳಿದರು.
ಸಮಾನ ನಾಗರಿಕ ಸಂಹಿತೆಯು ಸಂವಿಧಾನದ ರಾಜ್ಯ ನೀತಿ ನಿರ್ದೇಶನ ತತ್ವಗಳ ಗುರಿಗಳ ಭಾಗವಾಗಿದೆ ಮತ್ತು ಅಂಬೇಡ್ಕರ್ ಇದರ ಪ್ರತಿಪಾದಕರಾಗಿದ್ದ ಎಂಬ ಬಿಜೆಪಿಯ ವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸುವುದು ಅಂಬೇಡ್ಕರ್ ರ ಗುರಿಯಾಗಿತ್ತು ಎಂದರು. ನಮ್ಮ ಸಂವಿಧಾನದ ಪ್ರಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಬಗ್ಗೆ ಸರ್ಕಾರಕ್ಕೆ ಗೌರವವಿದ್ದರೆ, ಅದು ಹಿಂದೂ ಧರ್ಮದ ಎಲ್ಲಾ ಜಾತಿಗಳಿಗೆ ಯುಸಿಸಿಯನ್ನು ತರಬೇಕು, ದೇಶದ ಎಲ್ಲಾ ಧರ್ಮಗಳಿಗೆ ಅಲ್ಲ" ಎಂದು ಅವರು ಹೇಳಿದರು.