ಲೋಕಪಾಲ್ ಮುಖ್ಯಸ್ಥರಾಗಿ ʼಸುಪ್ರೀಂʼ ಮಾಜಿ ನ್ಯಾಯಮೂರ್ತಿ ಅಜಯ್ ಮಾಣಿಕ್‌ ರಾವ್ ಖಾನ್ವಿಲ್ಕರ್ ನೇಮಕ

Update: 2024-02-27 17:32 GMT

ಅಜಯ್ ಮಾಣಿಕ್‌ ರಾವ್ ಖಾನ್ವಿಲ್ಕರ್ | Photo: NDTV 

ಹೊಸದಿಲ್ಲಿ : ಲೋಕಪಾಲದ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಜಯ್ ಮಾಣಿಕ್‌ ರಾವ್ ಖಾನ್ವಿಲ್ಕರ್ ಅವರನ್ನು ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ.

ನ್ಯಾಯಮೂರ್ತಿ ಲಿಂಗಪ್ಪ ನಾರಾಯಣ ಸ್ವಾಮಿ, ನ್ಯಾಯಮೂರ್ತಿ ಸಂಜಯ್ ಯಾದವ್, ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ಸುಶೀಲ್ ಚಂದ್ರ, ಪಂಕಜ್ ಕುಮಾರ್ ಮತ್ತು ಅಜಯ್ ಟಿರ್ಕಿ ಅವರನ್ನು ಲೋಕಪಾಲ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.

ನ್ಯಾಯಮೂರ್ತಿ ಖಾನ್ವಿಲ್ಕರ್ 2016 ರ ಮೇ 13 ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದು ಸೇವೆ ಸಲ್ಲಿಸಿದ್ದರು. ಅನೇಕ ಮಹತ್ವದ ತೀರ್ಪನ್ನು ನೀಡಿದ್ದರು.

ಆಧಾರ್ ಪ್ರಕರಣದ ತೀರ್ಪು, 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿ ಹಾಗೂ ಇತರ 63 ಜನರಿಗೆ ಎಸ್‌ಐಟಿ ನೀಡಿದ ಕ್ಲೀನ್ ಚಿಟ್ ನೀಡಿದ್ದನ್ನು ಎತ್ತಿ ಹಿಡಿದಿದ್ದು ಅವರು ನೀಡಿದ್ದ ತೀರ್ಪುಗಳಲ್ಲಿ ಪ್ರಮುಖವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News