ಬಿಜೆಪಿ ಸೆಮಿನಾರ್ ನಲ್ಲಿ ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಕೂರಿಸಿದ ಮುಂಬೈನ ಕಾಲೇಜು | ಫ್ರೀ ಪ್ರೆಸ್ ಜರ್ನಲ್ ವರದಿ

Update: 2024-03-23 17:14 GMT

Photocredit : freepressjournal.in

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮುಂಬೈನ ಕಾಂಡಿವಲಿಯಲ್ಲಿರುವ ಠಾಕೂರ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಬಿಎಂಎಂ ವಿದ್ಯಾರ್ಥಿಗಳ ಐಡಿ ಕಾರ್ಡ್ ಗಳನ್ನು ವಶಪಡಿಸಿಕೊಂಡಿರುವುದಲ್ಲದೆ, ಅವರು ಕಾಲೇಜಿನ ಸಂಕೀರ್ಣದಲ್ಲಿ ಕಾಲೇಜು ಆಡಳಿತ ಮಂಡಳಿಯು ಆಯೋಜಿಸಿದ್ದ ಬಿಜೆಪಿ ಸದಸ್ಯರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಂತೆ ಮಾಡಲಾಗಿದೆ.

ಕಾಲೇಜಿನ ಕಟ್ಟಡದ ಏಳನೆ ಮಹಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮಧ್ಯದಲ್ಲೇ ಎದ್ದು ಹೋಗಬಹುದು ಎಂಬ ನಿರೀಕ್ಷೆಯಲ್ಲಿ ಕಾಲೇಜು ಆಡಳಿತ ಮಂಡಳಿಯು ಕೊಠಡಿಯ ನಿರ್ಗಮನ ದ್ವಾರಕ್ಕೆ ಬೀಗ ಹಾಕಿರುವುದು ಕಂಡು ಬಂದಿದೆ.

ಅಲ್ಲಿಗೆ ತೆರಳಿದ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಸಾಧನೆಗಳ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಪುತ್ರ ಧ್ರುವ್ ಗೋಯಲ್ ಮಾತನಾಡುವವರಿದ್ದಾರೆ ಎಂಬ ಸಂಗತಿ ವಿದ್ಯಾರ್ಥಿಗಳ ಅರಿವಿಗೆ ಬಂದಿದೆ.

ಈ ಘಟನೆಯ ಬಗ್ಗೆ ವಿದ್ಯಾರ್ಥಿಗಳು ತೀವ್ರ ಅಸಮಾಧಾನಗೊಂಡಿದ್ದು, ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ಅವರಿಗೆ ಅಚ್ಚರಿಯೊಂದನ್ನು ನೀಡಿರುವುದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಹೆಸರೇಳಲಿಚ್ಛಿಸದ ವಿದ್ಯಾರ್ಥಿಗಳು, ನಮ್ಮ ಮೇಲೆ ಪರೀಕ್ಷೆಯ ಒತ್ತಡ ಹೇರಲಾಯಿತು ಹಾಗೂ ಆಡಳಿತ ಮಂಡಳಿಯ ಈ ವಿಚಿತ್ರ ನಡವಳಿಕೆಯಿಂದ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿತು ಎಂದು ಹೇಳಿದ್ದಾರೆ.

ಸಭೆಗೆ ಹಾಜರಾದ ನಂತರ, ಕಾರ್ಯಕ್ರಮವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಎಳೆದಾಡಲಾಗಿದ್ದು, ವೀಡಿಯೊವನ್ನು ತಕ್ಷಣವೇ ಅಳಿಸಿ ಹಾಕುವಂತೆ ಆದೇಶಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯ ವರ್ತನೆಯ ಬಗ್ಗೆ ಧ್ವಿನಿ ಎತ್ತುವ ಧೈರ್ಯ ತೋರಿದ ವಿದ್ಯಾರ್ಥಿಯೊಬ್ಬನನ್ನೂ ಮೌನಗೊಳಿಸಲಾಗಿದೆ.

ಕೊನೆಗೂ ಆ ವಿದ್ಯಾರ್ಥಿ ಮಾತನಾಡುವಲ್ಲಿ ಯಶಸ್ವಿಯಾಗಿದ್ದು, ಸಭೆಗೂ ಮುನ್ನ ನಡೆದಿರುವ ಘಟನೆಗಳನ್ನು ಗೋಯಲ್ ಗೆ ತಿಳಿಸಿದ್ದಾರೆ.

ಒಮ್ಮೆ ಗೋಯಲ್ ಸ್ಥಳದಿಂದ ನಿರ್ಗಮಿಸಿದ ನಂತರ, ವೇದಿಕೆಯನ್ನು ಹತ್ತಿದ ಪ್ರಾಂಶುಪಾಲರು, ವಿದ್ಯಾರ್ಥಿಗಳ ಅಸಹಕಾರ ವರ್ತನೆಯ ಬಗ್ಗೆ ಕಿಡಿ ಕಾರಿದ್ದಾರೆ ಎಂದು ಹೇಳಲಾಗಿದೆ.

ಸೌಜನ್ಯ: freepressjournal.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News