2017ರಲ್ಲಿನ ಐರಿಶ್-ಬ್ರಿಟಿಶ್ ಮಹಿಳೆಯ ಅತ್ಯಾಚಾರ-ಹತ್ಯೆ ಪ್ರಕರಣ: ಗೋವಾ ವ್ಯಕ್ತಿಯನ್ನು ದೋಷಿ ಎಂದು ಘೋಷಿಸಿದ ನ್ಯಾಯಾಲಯ

Update: 2025-02-14 18:34 IST
2017ರಲ್ಲಿನ ಐರಿಶ್-ಬ್ರಿಟಿಶ್ ಮಹಿಳೆಯ ಅತ್ಯಾಚಾರ-ಹತ್ಯೆ ಪ್ರಕರಣ: ಗೋವಾ ವ್ಯಕ್ತಿಯನ್ನು ದೋಷಿ ಎಂದು ಘೋಷಿಸಿದ ನ್ಯಾಯಾಲಯ

ಸಾಂದರ್ಭಿಕ ಚಿತ್ರ | PC : ANI 

  • whatsapp icon

ಪಣಜಿ: 2017ರಲ್ಲಿ ನಡೆದಿದ್ದ ಐರಿಶ್-ಬ್ರಿಟಿಶ್ ಮಹಿಳೆ ಡೇನಿಯಲ್ ಮ್ಯಾಕ್ ಲಾಫಿನ್ ಅತ್ಯಾಚಾರ-ಹತ್ಯೆ ಪ್ರಕರಣದಲ್ಲಿ 31 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ದೋಷಿ ಎಂದು ಶುಕ್ರವಾರ ನ್ಯಾಯಾಲಯ ಘೋಷಿಸಿದೆ.

ಅವಳಿ ಅಪರಾಧಗಳ ಏಕೈಕ ಆರೋಪಿಯಾಗಿದ್ದ ಸ್ಥಳೀಯ ನಿವಾಸಿ ವಿಕಾಸ್ ಭಗತ್ ನನ್ನು ಮಾರ್ಗೋವಾದಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕ್ಷಮಾ ಜೋಶಿ ಅಪರಾಧಿ ಎಂದು ಘೋಷಿಸಿದ್ದಾರೆ ಎಂದು ಮೃತ ಮಹಿಳೆಯ ತಾಯಿ ಆ್ಯಂಡ್ರಿಯಾ ಬ್ರಾನಿಗನ್ ರನ್ನು ಪ್ರತಿನಿಧಿಸುತ್ತಿರುವ ವಕೀಲ ವಿಕ್ರಮ್ ವರ್ಮ ತಿಳಿಸಿದ್ದಾರೆ.

ಫೆಬ್ರವರಿ 17ರಂದು ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ ಎಂದು ಅವರು ಹೇಳಿದ್ದು, ಆರೋಪಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕು ಎಂದು ಸಾರ್ವಜನಿಕ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News