ಜನರ ಆಶೀರ್ವಾದ ಇದ್ದರೆ ಮುಂದಿನ ವರ್ಷ ಮರಳುತ್ತೇನೆ :ಪ್ರಧಾನಿ ಮೋದಿ

Update: 2023-08-15 04:47 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದಿಲ್ಲಿಯ ಕೆಂಪು ಕೋಟೆಯಲ್ಲಿ ಬೆಳಗ್ಗೆ 7:30ಕ್ಕೆ ಧ್ವಜಾರೋಹಣ ನೆರವೇರಿಸಿ, ಭಾರತದ ಮುಂದಿರುವ ಬೃಹತ್ ಅವಕಾಶಗಳ ಕುರಿತು ಮಾತನಾಡಿದರು ಹಾಗೂ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು. ಜನರ ಆಶೀರ್ವಾದ ಇದ್ದರೆ ಮುಂದಿನ ವರ್ಷ ಮರಳುತ್ತೇನೆ ಎಂದರು.

ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಗಳ ಬಗ್ಗೆ ಕಳವಳ ವ್ಯಕ್ತಪಡಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಆರಂಭಿಸಿದರು. "ಕಳೆದ ಕೆಲವು ವಾರಗಳಲ್ಲಿ ಮಣಿಪುರವು ಹಿಂಸಾಚಾರದ ಅಲೆಗೆ ಸಾಕ್ಷಿಯಾಯಿತು. ಹಲವಾರು ಜನರು ಪ್ರಾಣ ಕಳೆದುಕೊಂಡರು,ನಮ್ಮ ತಾಯಿ ಮತ್ತು ಸಹೋದರಿಯರಿಗೆ ಅವಮಾನವಾಯಿತು. ಆದರೆ, ನಿಧಾನವಾಗಿ ಈ ಪ್ರದೇಶದಲ್ಲಿ ಶಾಂತಿ ಮರಳುತ್ತಿದೆ. ಭಾರತವು ಮಣಿಪುರದೊಂದಿಗೆ ನಿಂತಿದೆ" ಎಂದು ಅವರು ಹೇಳಿದರು.

ತಮ್ಮ ಸರಕಾರದ "ಟ್ರ್ಯಾಕ್ ರೆಕಾರ್ಡ್" ಅನ್ನು ಎತ್ತಿ ತೋರಿಸಿದ ಮೋದಿ ಅವರು ಜನರನ್ನು ಸಬಲೀಕರಣಗೊಳಿಸಲು ಮತ್ತು ರಾಷ್ಟ್ರವನ್ನು ಅಭಿವೃದ್ಧಿಪಡಿಸಲು ಮಾಡಿದ ವಿವಿಧ ಪ್ರಯತ್ನಗಳನ್ನು ವಿವರಿಸಿದರು

. "ಭಾರತವು ತಾನು ಪರಿಹರಿಸುವದನ್ನು ಪೂರೈಸುತ್ತದೆ ಎಂಬುದಕ್ಕೆ ನಮ್ಮ ದಾಖಲೆಯು ದೃಢೀಕರಿಸುತ್ತದೆ" ಎಂದು ವಿವಿಧ ಗುರಿಗಳನ್ನು ಪೂರೈಸುವಲ್ಲಿ ಯಶಸ್ಸನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ಭಾರತ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಲಿದೆ ಎಂಬುದು 'ಮೋದಿಯವರ ಗ್ಯಾರಂಟಿ’ಎಂದು ಅವರು ಹೇಳಿದರು.

"ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಹಾಗೂ ವೈವಿಧ್ಯತೆ" ಒಟ್ಟಾಗಿ ರಾಷ್ಟ್ರದ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ತ್ರಿವೇಣಿ ಭಾರತದ ಎಲ್ಲಾ ಕನಸುಗಳನ್ನು ನನಸಾಗಿಸಬಹುದು ಎಂದು ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News