“ಭಾರತ ನಿಮ್ಮ ಅಪ್ಪನದ್ದಾ?”: ಬಿಜೆಪಿಗೆ ಅರವಿಂದ್ ಕೇಜ್ರಿವಾಲ್ ಚಾಟಿ

Update: 2023-09-16 16:03 GMT

 ಅರವಿಂದ್ ಕೇಜ್ರಿವಾಲ್| Photo: PTI 

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೇಶದ ಹೆಸರನ್ನು ಬದಲಾಯಿಸಲು ಹೊರಟಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಭಾರತ ನಿಮ್ಮ ಅಪ್ಪನಿಗೆ ಸೇರಿದ್ದಾ? ಎಂದು ಪ್ರಶ್ನಿಸಿದ್ದಾರೆ.

ಕಳೆದ ವರ್ಷದವರೆಗೆ ಬಿಜೆಪಿ ಸರ್ಕಾರವು ಇಂಡಿಯಾ ಎಂಬ ಹೆಸರಿನಲ್ಲಿ ಹಲವಾರು ಕೇಂದ್ರೀಯ ಯೋಜನೆಗಳನ್ನು ನಡೆಸುತ್ತಿತ್ತು, ಆದರೆ ಈಗ ವಿಪಕ್ಷಗಳ ಒಕ್ಕೂಟವು ಇಂಡಿಯಾ ರಚಿಸಿದ ಬಳಿಕ ದೇಶದ ಹೆಸರನ್ನೇ ಬದಲಾಯಿಸಲು ಮುಂದಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಭಾರತವು ನಿಮ್ಮ ಅಪ್ಪನಿಗೆ ಸೇರಿದೆಯೇ? ಇದು 140 ಕೋಟಿ ಜನರಿಗೆ ಸೇರಿದ್ದು, ಇಂಡಿಯಾ ನಮ್ಮ ಹೃದಯದಲ್ಲಿದೆ. ಭಾರತ ನಮ್ಮ ಹೃದಯದಲ್ಲಿದೆ. ಹಿಂದೂಸ್ತಾನ್ ನಮ್ಮ ಹೃದಯದಲ್ಲಿದೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಛತ್ತೀಸ್‌ಗಢದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಹೇಳಿದರು.

"ಭಾರತದ ಹೆಸರನ್ನು ಬದಲಾಯಿಸುವ ಧೈರ್ಯವಿದೆಯೇ ಎಂದು ನಾನು ಬಿಜೆಪಿಗೆ ಸವಾಲು ಹಾಕಲು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.

"ಬಿಜೆಪಿ ಸರ್ಕಾರವು ರಾಷ್ಟ್ರದ ಹೆಸರನ್ನು ಇಂಡಿಯಾದಿಂದ ಭಾರತ್ ಎಂದು ಬದಲಾಯಿಸುತ್ತೇವೆ ಎನ್ನುತ್ತಿದೆ. ನಾಳೆ, ವಿರೋಧ ಪಕ್ಷದ ಮೈತ್ರಿಕೂಟವು ತನ್ನ ಹೆಸರನ್ನು ʼಭಾರತ್ʼ ಎಂದು ಇಟ್ಟರೆ ನೀವು (ಬಿಜೆಪಿ) ಮತ್ತೆ ದೇಶದ ಹೆಸರನ್ನು ಬದಲಾಯಿಸುತ್ತೀರಾ?" ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News