ದುಬಾರಿ ಲೆದರ್ ಬ್ಯಾಗ್ ಬಳಸಿದ ಜಯ ಕಿಶೋರಿ | ಆಧ್ಯಾತ್ಮಿಕ ಪ್ರವಚನಕಾರ್ತಿಯ ಐಷಾರಾಮಿ ಜೀವನಶೈಲಿಗೆ ಟೀಕೆ

Update: 2024-10-28 13:57 GMT

ಗಾಯಕಿ ಜಯ ಕಿಶೋರಿ | PC : iamjayakishori \ instagram.com

 

ಹೊಸದಿಲ್ಲಿ : ಆಧ್ಯಾತ್ಮಿಕ ಪ್ರವಚನಕಾರ್ತಿ, ಗಾಯಕಿ ಜಯ ಕಿಶೋರಿ ತನ್ನ ಅನುಯಾಯಿಗಳಿಗೆ ದೇವರು ಮತ್ತು ಸರ್ವ ಪರಿತ್ಯಾಗದ ಬಗ್ಗೆ ಬೋಧಿಸುತ್ತಾರೆ. ಆದರೆ ಅವರೇ 2 ಲಕ್ಷಕ್ಕೂ ಅಧಿಕ ಮೌಲ್ಯದ ದುಬಾರಿ ಡಿಯೊರ್(Dior)‌ ಬ್ಯಾಗ್ ನ್ನು ಬಳಸಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.

ಆಧ್ಯಾತ್ಮಿಕ ಪ್ರವಚನಕಾರ್ತಿ ಜಯ ಕಿಶೋರಿ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಡಿಯೊರ್(Dior) ಬ್ಯಾಗ್ನೊಂದಿಗೆ ತೆರಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Dior ವೆಬ್ಸೈಟ್ನಲ್ಲಿ ಬ್ಯಾಗ್ ಬಗ್ಗೆ ಹುಡುಕಾಟ ನಡೆಸಿದಾಗ,  ಹತ್ತಿ ಮತ್ತು ಕರುವಿನ ಚರ್ಮದಿಂದ ಈ ಲೆದರ್ ಬ್ಯಾಗ್ ತಯಾರಿಸಲಾಗುತ್ತದೆ ಎಂದು ಹೇಳುತ್ತದೆ. ಹಿಂದೂ ಪ್ರವಚನಕಾರ್ತಿಯೇ ಕರುವಿನ ಚರ್ಮದ ಬ್ಯಾಗ್ ಬಳಕೆ ಮಾಡಿರುವುದು ಮತ್ತಷ್ಟು ಟೀಕೆಗೆ ಕಾರಣವಾಗಿದೆ.

ಈ ಬಗ್ಗೆ ವೀಣಾ ಜೈನ್ ಎಂಬವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಆಧ್ಯಾತ್ಮಿಕ ಪ್ರವಚನಕಾರ್ತಿ ಜಯ ಕಿಶೋರಿ 2,10,000 ಮೌಲ್ಯದ Dior ಬ್ಯಾಗ್ ನ್ನು ಹೊಂದಿದ್ದಾರೆ. ಅವರು ಸರ್ವ ಪರಿತ್ಯಾಗದ ಬೋಧನೆ ಮಾಡುತ್ತಾರೆ ಮತ್ತು ತನ್ನನ್ನು ಕೃಷ್ಣನ ಭಕ್ತೆ ಎಂದು ಕರೆದುಕೊಳ್ಳುತ್ತಾರೆ. ಡಿಯರ್ ಬ್ಯಾಗ್ ನ್ನು ಕರುವಿನ ಚರ್ಮದಿಂದ ತಯಾರಿಸಲಾಗುತ್ತದೆ ಎಂದು ವೀಣಾ ಜೈನ್ ಬರೆದಿದ್ದಾರೆ.

ಜಯ ಕಿಶೋರಿ ಜನರು ಜೀವನದಲ್ಲಿ ಎಲ್ಲವನ್ನೂ ತ್ಯಜಿಸುವಂತೆ ಹೇಳುತ್ತಾರೆ. ಆದರೆ, ಅವರೇ 2 ಲಕ್ಷ ಮೌಲ್ಯದ ದುಬಾರಿ ಬ್ಯಾಗ್ ಬಳಸುತ್ತಾರೆ. ಈ ಪ್ರವಚನಕಾರರಲ್ಲಿ ಹೆಚ್ಚಿನವರು ಹೀಗೆಯೇ ಇರುತ್ತಾರೆ. ನಮ್ಮ ಧರ್ಮವನ್ನು ಲಾಭಕ್ಕಾಗಿ ಮತ್ತು ಅದ್ದೂರಿ ಜೀವನಕ್ಕಾಗಿ ಬಳಸುತ್ತಾರೆ ಎಂದು ಇನ್ನೋರ್ವ ಎಕ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

ಇದಲ್ಲದೆ ಎಕ್ಸ್ ಬಳಕೆದಾರರು ಗಾಯಕಿ ಧರಿಸಿದ್ದ ರೋಲೆಕ್ಸ್ ವಾಚ್ ಬಗ್ಗೆಯೂ ಕಮೆಂಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News