ಅದಾನಿ, ಬುಚ್, ಮೋದಿ ಸರಕಾರದ ನಡುವೆ ನಂಟು | ಯುಟ್ಯೂಬ್ ವೀಡಿಯೊದಲ್ಲಿ ರಾಹುಲ್ ಗಾಂಧಿ ಪ್ರತಿಪಾದನೆ

Update: 2024-10-28 16:31 GMT

 ರಾಹುಲ್ ಗಾಂಧಿ | PC : PTI 

ಹೊಸದಿಲ್ಲಿ : ಸೆಬಿ ಮುಖ್ಯಸ್ಥೆ ಮಧವಿ ಬುಜ್ ಅವರು ಗೌತಮ್ ಅದಾನಿ ಅವರ ಮೌಲ್ಯ ಹಾಗೂ ಘನತೆಯನ್ನು ರಕ್ಷಿಸುತ್ತಿದ್ದಾರೆ ಎಂದು ದೇಶದ ಕಾರ್ಪೋರೇಟ್ ವಲಯದಲ್ಲಿ ಗುಲ್ಲೆದ್ದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಯುಟ್ಯೂಬ್ ಚಾನೆಲ್‌ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಭಾರತದ ಶೇರು ಮಾರುಕಟ್ಟೆಯ ನಿಯಂತ್ರಕ ಸೆಬಿಯ ಮುಖ್ಯಸ್ಥೆ ಬುಚ್ ವಿರುದ್ಧ ಈ ಆರೋಪ ಮಾಡಲಾಗಿದೆ.

ಈ ವೀಡಿಯೊ ರಾಹುಲ್ ಗಾಂಧಿ, ಕಾಂಗ್ರೆಸ್‌ ನ ಮಾಧ್ಯಮ ಹಾಗೂ ಪ್ರಚಾರ ಇಲಾಖೆಯ ಮುಖ್ಯಸ್ಥ ಪವನ್ ಖೇರಾ ಅವರನ್ನು ಒಳಗೊಂಡಿದೆ. ಅವರಿಬ್ಬರು ಬುಚ್ ಅವರ ಹಿತಾಸಕ್ತಿ ಸಂಘರ್ಷದ ಕುರಿತು ಮಾತನಾಡಿದ್ದಾರೆ.

‘‘ಅವರು ಕೇಂದ್ರ ಸರಕಾರವನ್ನು ಬ್ಲಾಕ್‌ ಮೇಲ್ ಮಾಡುತ್ತಿದ್ದಾರೆ. ಅವರು ಪ್ರಧಾನಿ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ’’ ಎಂದು ಪವನ್ ಖೇರಾ ವೀಡಿಯೋದಲ್ಲಿ ಹೇಳಿದ್ದಾರೆ. ‘‘ಆದುದರಿಂದ ಅವರು ಮೂಲಭೂತವಾಗಿ ಅದಾನಿ ಅವರ ಮೌಲ್ಯ ಹಾಗೂ ಘನತೆಯನ್ನು ರಕ್ಷಿಸುತ್ತಿದ್ದಾರೆ’’ ಎಂದು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

‘‘ಸಾಂಸ್ಥಿಕ ಕುಸಿತವು ಈಗ ಕ್ರೋನಿ ಕ್ಯಾಪಟಲಿಸಂ (ಸರಕಾರ ಹಾಗೂ ಕಾರ್ಪೋರೇಟ್ ನಡುವಿನ ಕೊಡು ಕೊಳ್ಳುವಿಕೆ) ಹೆಚ್ಚು ಅಪಾಯಕಾರಿ ರೂಪಕ್ಕೆ ದಾರಿ ಮಾಡಿಕೊಟ್ಟಿದೆ-ಅದಾನಿ ಬಚಾವೊ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

"ಪ್ರಸಕ್ತ ಆಡಳಿತ ಕೇವಲ ಏಕಸ್ವಾಮ್ಯವನ್ನು ಮಾತ್ರ ಪ್ರೋತ್ಸಾಹಿಸುತ್ತಿಲ್ಲ. ಬದಲಾಗಿ ಅದು ರಾಷ್ಟ್ರದ ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇರುವಂತೆ ಮಾಡಲು ಸಕ್ರಿಯವಾಗಿ ಗಮನ ಕೇಂದ್ರೀಕರಿಸಿದೆ’’ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಸೆಬಿಯ ಕಾರ್ಯನಿರ್ವಹಣೆಯನ್ನು ಮರು ಪರಿಶೀಲಿಸಲು ಸಂಸತ್ತಿನ ಸಾರ್ವಜನಿಕ ಲೆಕ್ಕಾಚಾರ ಸಮಿತಿ ಬುಧವಾರ ಕರೆದ ಸಭೆಯಲ್ಲಿ ಬುಚ್ ಪಾಲ್ಗೊಂಡಿರಲಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News