ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯಲ್ಲಿ ತೇಜಸ್ವಿ ಸೂರ್ಯ, ಉವೈಸಿ

Update: 2024-08-09 16:41 GMT

 ಅಸದುದ್ದೀನ್‌ ಉವೈಸಿ | ತೇಜಸ್ವಿ ಸೂರ್ಯ

ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸಲಿರುವ ಜಂಟಿ ಸದನ ಸಮಿತಿಗೆ 31 ಸದಸ್ಯರನ್ನು ನೇಮಿಸಲಾಗಿದ್ದು, ಈ ಪೈಕಿ 21 ಮಂದಿ ಲೋಕಸಭಾ ಸದಸ್ಯರು ಹಾಗೂ 10 ಮಂದಿ ರಾಜ್ಯಸಭಾ ಸದಸ್ಯರನ್ನು ಒಳಗೊಂಡಿರಲಿದೆ. ಈ ಸಮಿತಿಯು ಮುಂದಿನ ಅಧಿವೇಶನದ ವೇಳೆಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಸಮಿತಿಯಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಉವೈಸಿ ಅವರಿಗೂ ಸ್ಥಾನ ನೀಡಲಾಗಿದೆ.

ಶುಕ್ರವಾರ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಮಂಡಿಸಿದ ನಿರ್ಣಯವನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಅವರು ಸಮಿತಿಯಲ್ಲಿರುವ ಸದಸ್ಯರ ಹೆಸರನ್ನು ಈ ಸಂದರ್ಭದಲ್ಲಿ ಪ್ರಕಟಿಸಿದರು.

ಲೋಕಸಭೆಯಿಂದ 21 ಮಂದಿ ಸದಸ್ಯರು ಇರಲಿದ್ದು, ಈ ಪೈಕಿ ಬಿಜೆಪಿಯ ಎಂಟು ಸದಸ್ಯರು ಸೇರಿದಂತೆ 12 ಸದಸ್ಯರು ಎನ್ ಡಿ ಎ ಮೈತ್ರಿಕೂಟಕ್ಕೆ ಸೇರಿದ್ದರೆ, ಉಳಿದ ಒಂಬತ್ತು ಮಂದಿ ವಿರೋಧ ಪಕ್ಷಗಳ ಸದಸ್ಯರಾಗಿದ್ದಾರೆ. ರಾಜ್ಯಸಭೆಯಿಂದ ನಾಲ್ಕು ಮಂದಿ ಬಿಜೆಪಿ ಸದಸ್ಯರು, ನಾಲ್ಕು ಮಂದಿ ವಿರೋಧ ಪಕ್ಷಗಳ ಸದಸ್ಯರು ಹಾಗೂ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿರುವ ವೈ ಎಸ್ ಆರ್ ಸಿ ಪಿ ಯ ಓರ್ವ ಸದಸ್ಯರು ಜಂಟಿ ಸದನ ಸಮಿತಿಗೆ ನೇಮಕಗೊಂಡಿದ್ದಾರೆ.

ಲೋಕಸಭೆಯಿಂದ ನಾಮನಿರ್ದೇಶನಗೊಂಡ ಸದಸ್ಯರು:

1. ಜಗದಾಂಬಿಕಾ ಪಾಲ್ (ಬಿಜೆಪಿ)

2. ಪಿ.ನಿಶಿಕಾಂತ್ ದುಬೆ (ಬಿಜೆಪಿ)

3. ತೇಜಸ್ವಿ ಸೂರ್ಯ (ಬಿಜೆಪಿ)

4. ಅಪರಾಜಿತ ಸಾರಂಗಿ (ಬಿಜೆಪಿ)

5. ಸಂಜಯ್ ಜೈಸ್ವಾಲ್ (ಬಿಜೆಪಿ)

6. ದಿಲೀಪ್ ಸಾಯಿಕಿಯ (ಬಿಜೆಪಿ)

7. ಅಭಿಜಿತ್ ಗಂಗೋಪಾಧ್ಯಾಯ (ಬಿಜೆಪಿ)

8. ಡಿ.ಕೆ.ಅರುಣ (ಬಿಜೆಪಿ)

9. ಗೌರವ್ ಗೊಗೊಯಿ (ಕಾಂಗ್ರೆಸ್)

10. ಇಮ್ರಾನ್ ಮಸೂದ್ (ಕಾಂಗ್ರೆಸ್)

11. ಮುಹಮ್ಮದ್ ಜಾವೇದ್ (ಕಾಂಗ್ರೆಸ್)

12. ಮೊಹಿಬುಲ್ಲಾ (ಸಮಾಜವಾದಿ ಪಕ್ಷ)

13. ಕಲ್ಯಾಣ್ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್ ಪಕ್ಷ)

14. ಎ.ರಾಜಾ (ಡಿಎಂಕೆ)

15. ಲವು ಶ್ರೀ ಕೃಷ್ಣ ದೇವರಾಯಲು (ಟಿಡಿಪಿ)

16. ದಿಲೇಶ್ವರ್ ಕಮೈತ್ (ಜೆಡಿಯು)

17. ಅರವಿಂದ್ ಸಾವಂತ್ (ಶಿವಸೇನೆ (ಉದ್ಧವ್ ಠಾಕ್ರೆ ಬಣ))

18. ಸುರೇಶ್ ಮಾತ್ರೆ (ಎನ್ಸಿಪಿ (ಶರದ್ ಪವಾರ್ ಬಣ))

19. ನರೇಶ್ ಮಸ್ಕೆ (ಶಿವಸೇನೆ)

20. ಅರುಣ್ ಭಾರತಿ (ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್ ಪಾಸ್ವಾನ್ ಬಣ))

21. ಅಸದುದ್ದೀನ್ ಉವೈಸಿ (ಎಐಎಂಐಎಂ)

ರಾಜ್ಯಸಭೆಯಿಂದ ನಾಮನಿರ್ದೇಶನಗೊಂಡ ಸದಸ್ಯರು

1. ಬೃಜ್ ಲಾಲ್ (ಬಿಜೆಪಿ)

2. ಮೇಧಾ ವಿಶ್ರಾಮ್ ಕುಲಕರ್ಣಿ (ಬಿಜೆಪಿ)

3. ಗುಲಾಮ್ ಅಲಿ (ಬಿಜೆಪಿ)

4. ರಾಧಾ ಮೋಹನ್ ದಾಸ್ ಅಗರ್ವಾಲ್ (ಬಿಜೆಪಿ)

5. ಸೈಯದ್ ನಾಸೀರ್ ಹುಸೈನ್ (ಕಾಂಗ್ರೆಸ್)

6. ಮುಹಮ್ಮದ್ ನದೀಮುಲ್ ಹಕ್ (ತೃಣಮೂಲ ಕಾಂಗ್ರೆಸ್ ಪಕ್ಷ)

7. ವಿ.ವಿಜಯಸಾಯಿ ರೆಡ್ಡಿ (ವೈಎಸ್ಆಸರ್ಸಿಸಪಿ)

8. ಎಂ. ಮುಹಮ್ಮದ್ ಅಬ್ದುಲ್ಲಾ (ಡಿಎಂಕೆ)

9. ಸಂಜಯ್ ಸಿಂಗ್ (ಆಮ್ ಆದ್ಮಿ ಪಕ್ಷ)

10. ಡಾ.ಡಿ ವೀರೇಂದ್ರ ಹೆಗ್ಗಡೆ (ನಾಮನಿರ್ದೇಶನ ಸದಸ್ಯ)

ಜಂಟಿ ಸದನ ಸಮಿತಿಯ ಅಧ್ಯಕ್ಷರ ಹೆಸರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸದ್ಯದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ. ಸಮಿತಿಯ ನೇತೃತ್ವವನ್ನು ಬಿಜೆಪಿಯ ಪಾಲ್ ವಹಿಸಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಗಿದ್ದ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಸದನದಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಇದಾದ ನಂತರ, ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಈ ಸಮಿತಿಯು ಮುಂದಿನ ಅಧಿವೇಶನದ ಪ್ರಥಮ ವಾರದ ಕೊನೆಯ ದಿನದಂದು ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News