ಪತ್ರಕರ್ತ ನಿಖಿಲ್ ವಾಗ್ಲೆ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ

Update: 2024-02-09 17:32 GMT

Photo:  India today 

ಪುಣೆ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಪತ್ರಕರ್ತ ನಿಖಿಲ್ ವಾಗ್ಲೆ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಶುಕ್ರವಾರ ದಾಳಿ ನಡೆಸಿದ್ದಾರೆ ಎಂದು ndtv ವರದಿ ಮಾಡಿದೆ. ಎಲ್ ಕೆ ಅಡ್ವಾಣಿ ಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ ನಂತರ ವಾಗ್ಲೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಎಲ್‌ ಕೆ ಅಡ್ವಾಣಿ ವಿರುದ್ಧದ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.

ರಾಷ್ಟ್ರ ಸೇವಾದಳ ಆಯೋಜಿಸಿದ್ದ 'ನಿರ್ಭಯ್ ಬಾನೋ' ಕಾರ್ಯಕ್ರಮಕ್ಕೆ ವಾಗ್ಲೆ ಮತ್ತು ಅಸೀಮ್ ಸರೋದೆ ಮತ್ತು ವಿಶ್ವಂಭರ ಚೌಧರಿ ಪೊಲೀಸ್ ರಕ್ಷಣೆಯಲ್ಲಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಶಾಯಿ ಎಸೆದಿದ್ದಾರೆ ಎಂದು ಡೆಕ್ಕನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಂಡೋಜಿ ಬಾಬಾ ಚೌಕ್ನಲ್ಲಿ ಬಿಜೆಪಿ ಕಾರ್ಯಕರ್ತರು ಕಾರನ್ನು ಸುತ್ತುವರಿದು ಅದನ್ನು ಧ್ವಂಸಗೊಳಿಸಿ, ವಾಹನದ ವಿಂಡ್ಸ್ಕ್ರೀನ್ ಮತ್ತು ಸೈಡ್ ಪ್ಯಾನ್ಗಳನ್ನು ಹಾನಿಗೊಳಿಸಿದರು ಎನ್ನಲಾಗಿದೆ. ಆದರೂ ವಾಗ್ಲೆ ಪೊಲೀಸ್ ರಕ್ಷಣೆಯಲ್ಲಿ ಕಾರ್ಯಕ್ರಮದ ಸ್ಥಳವನ್ನು ತಲುಪುವಲ್ಲಿ ಯಶಸ್ವಿಯಾದರು ಎಂದು ತಿಳಿದು ಬಂದಿದೆ.

ಬಳಿಕ 'ನಿರ್ಭಯ್ ಬಾನೋ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ವಾಗ್ಲೆ, "ನನ್ನ ಮೇಲೆ ದಾಳಿ ಮಾಡಿದ ಎಲ್ಲರನ್ನೂ ನಾನು ಕ್ಷಮಿಸುತ್ತೇನೆ. ನನ್ನ ಮೇಲೆ ಆರು ಬಾರಿ ದಾಳಿ ಮಾಡಲಾಗಿದೆ ಮತ್ತು ಇದು ಏಳನೇ ಬಾರಿಗೆ ನಡೆದಿರುವ ದಾಳಿ" ಎಂದು ಹೇಳಿದರು.

ಆಡಳಿತಾರೂಢ ಬಿಜೆಪಿ-ಶಿವಸೇನೆ ಮತ್ತು ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ ಕಾರ್ಯಕರ್ತರು ರಾಷ್ಟ್ರ ಸೇವಾ ದಳದ ಆವರಣದ ಹೊರಗೆ ಮೊದಲು ಘರ್ಷಣೆಯಲ್ಲಿ ತೊಡಗಿದ್ದು, ವಾಗ್ಲೆ ಅವರಿಗೆ ಮಾತನಾಡಲು ಅವಕಾಶ ನೀಡುವುದಾಗಿ ಹೇಳಿದರು.

ಪ್ರಧಾನಿ ಮತ್ತು ಎಲ್ ಕೆ ಅಡ್ವಾಣಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ವಾಗ್ಲೆ ವಿರುದ್ಧ ಪುಣೆಯಲ್ಲಿ ಪ್ರಕರಣ ದಾಖಲಾಗಿತ್ತು. "ನಿಖಿಲ್ ವಾಗ್ಲೆ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 500 (ಮಾನನಷ್ಟ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಗಳಡಿ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾವು ಈ ಬಗ್ಗೆ ಮತ್ತಷ್ಟು ತನಿಖೆ ಮಾಡುತ್ತಿದ್ದೇವೆ, " ಎಂದು ಪೊಲೀಸರು ಹೇಳಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಸುನೀಲ್ ದಿಯೋಧರ್ ಅವರು ನಿಖಿಲ್ ವಾಗ್ಲೆ ವಿರುದ್ಧ ವಿವಾದಾತ್ಮಕ ಹೇಳಿಕೆಗಳ ಕುರಿತು ಮಂಗಳವಾರ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಎಲ್‌ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದ ನಂತರ ಹಿರಿಯ ಪತ್ರಕರ್ತ x ನಲ್ಲಿ ಮಾನಹಾನಿಕರ ಟೀಕೆಗಳನ್ನು ಮಾಡಿರುವ ಆರೋಪಿ ಎದುರಿಸುತ್ತಿದ್ದಾರೆ. ನಿರ್ಭಯ್ ಬಾನೊ’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವಂತೆ ಪುಣೆ ಬಿಜೆಪಿ ಘಟಕ ಪೊಲೀಸರಿಗೆ ಮನವಿ ಮಾಡಿತ್ತು.

ಶಿವಸೇನೆಯ ಪುಣೆ ನಗರಾಧ್ಯಕ್ಷ ಪ್ರಮೋದ್ ಭಂಗಿರೆ ಅವರು ಈ ಕಾರ್ಯಕ್ರಮವನ್ನು ನಾವು ವಿರೋಧಿಸುತ್ತಿಲ್ಲ. ಆದರೆ ವಾಗ್ಲೆ ಅವರ ಭಾಗವಹಿಸುವಿಕೆಯನ್ನು ಮಾತ್ರ ವಿರೋಧಿಸುತ್ತಿದ್ದೇವೆ ಎಂದು ಹೇಳಿದರು."ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ಎಲ್ ಕೆ ಅಡ್ವಾಣಿ ವಿರುದ್ಧ ನಿಖಿಲ್ ವಾಗ್ಲೆ ಅವರ ಟೀಕೆಗಳನ್ನು ನಾವು ಖಂಡಿಸುತ್ತೇವೆ. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಇಂತಹ ಟೀಕೆಗಳನ್ನು ಮಾಡುವ ಮೂಲಕ ಸಮುದಾಯಗಳ ನಡುವೆ ಬಿರುಕು ಮೂಡಿಸಿದ್ದಾರೆ" ಎಂದು ಭಂಗಿರೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News