ಸಂಸದೆ ಕನಿಮೊಳಿ ಟಿಕೆಟ್​ ವಿವಾದ; ಕೆಲಸ ತೊರೆದ ಮಹಿಳಾ ಬಸ್ ಚಾಲಕಿಗೆ ಕಾರು ಉಡುಗೊರೆ ಕೊಟ್ಟ ಕಮಲ್ ಹಾಸನ್

Update: 2023-06-26 16:31 GMT

ಫೋಟೋ- Twitter@sidhuwrites

ಕೊಯಮತ್ತೂರು: ಡಿಎಂಕೆ ಸಂಸದೆ ಕನಿಮೋಳಿ ಅವರಿಗೆ ಟಿಕೆಟ್‌ ನೀಡಿರುವ ಉಂಟಾದ ವಿವಾದದ ಬಳಿಕ ಕೆಲಸಕ್ಕೆ ರಾಜಿನಾಮೆ ನೀಡಿದ್ದ ಚಾಲಕಿಗೆ ನಟ ಕಮಲ್‌ ಹಾಸನ್‌ ಕಾರ್‌ ಉಡುಗೊರೆ ನೀಡಿದ್ದಾರೆ.

ಕೊಯಮತ್ತೂರು ನಗರದ ಮೊದಲ ಮಹಿಳಾ ಬಸ್ ಚಾಲಕಿಯಾಗಿರುವ ಶರ್ಮಿಳಾ ಅವರಿಗೆ ಕಮಲ್ ಕಲ್ಚರಲ್ ಸೆಂಟರ್ ವತಿಯಿಂದ ಈ ಕಾರನ್ನು ನೀಡಲಾಗಿದೆ ಎಂದು ಕಮಲ್‌ ಹಾಸನ್ ತಿಳಿಸಿದ್ದಾರೆ.

ತನ್ನ ವಯಸ್ಸಿನ ಇತರ ಮಹಿಳೆಯರಿಗೆ ಉತ್ತಮ ಮಾದರಿಯಾಗಿದ್ದ ಶರ್ಮಿಳಾ ಅವರ ಸುತ್ತ ನಡೆಯುತ್ತಿರುವ ಚರ್ಚೆಯ ಬಗ್ಗೆ ನಾನು ದುಃಖಿತನಾಗಿದ್ದೆ. ಶರ್ಮಿಳಾ ಕೇವಲ ಚಾಲಕಿಯಾಗಿ ಉಳಿಯಬಾರದು. ಅನೇಕ ಶರ್ಮಿಳಾರನ್ನು ಸೃಷ್ಟಿಸಬೇಕೆಂಬುದು ನನ್ನ ನಂಬಿಕೆ. ಆಕೆ ಈಗ ಈ ಕಾರನ್ನು ಬಾಡಿಗೆ ಸೇವೆಗಾಗಿ ಬಳಸುತ್ತಾಳೆ ಮತ್ತು ಮುಂದೆ ಉದ್ಯಮಿಯಾಗಳಿದ್ದಾಳೆ ಎಂದು ಅವರು ಹೇಳಿದ್ದಾರೆ.

ಕಳೆದ ವಾರ, ಶರ್ಮಿಳಾ ಚಲಾಯಿಸುತ್ತಿದ್ದ ಬಸ್‌ನಲ್ಲಿ ಕನಿಮೊಳಿ ಪ್ರಯಾಣಿಸಿದ್ದರು. ಈ ವೇಳೆ ಅವರ ಬಳಿ ಟಿಕೆಟ್ ಇದ್ದರೂ ಕಂಡಕ್ಟರ್ ಸಂಸದೆಯನ್ನು ಅವಮಾನಿಸಿದ್ದಾರೆ ಎನ್ನಲಾಗಿದೆ. ಇದರಿಂದ ಚಾಲಕಿ ಶರ್ಮಿಳಾ ಕಂಡಕ್ಟರ್ ಜೊತೆಗೆ ವಾಗ್ವಾದ ನಡೆದಿತ್ತು. ಆದರೆ, ಪ್ರಚಾರಕ್ಕಾಗಿ ಶರ್ಮಿಳಾ ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೇಸತ್ತ ಶರ್ಮಿಳಾ ಚಾಲಕಿ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News