ಮಧ್ಯಪ್ರದೇಶ | ಮಹಿಳೆಯೊಬ್ಬರು ಬಂದೂಕು ಶುಚಿಗೊಳಿಸುತ್ತಿರುವ ವೀಡಿಯೊ ನೀಡಿದ ಸುಳಿವು ; ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆಯನ್ನು ಪತ್ತೆ ಹಚ್ಚಿದ ಪೊಲೀಸರು!

Update: 2024-08-12 13:28 GMT

PC : timesofindia.indiatimes.com

ಭೋಪಾಲ್: ಮಹಿಳೆಯೊಬ್ಬರು ಬಂದೂಕು ಅನ್ನು ಶುಚಿಗೊಳಿಸುತ್ತಿರುವ ವೀಡಿಯೊ ನೀಡಿದ ಸುಳಿವನ್ನು ಆಧರಿಸಿ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿನ ಅಕ್ರಮ ಬಂದೂಕು ಕಾರ್ಖಾನೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ವೀಡಿಯೊದಲ್ಲಿ ಮಹಿಳೆಯೊಬ್ಬರು ದೊಡ್ಡ ಪ್ರಮಾಣದ ಬಂದೂಕು ಗಳನ್ನು ಬ್ರಶ್ ನಿಂದ ಶುಚಿಗೊಳಿಸುತ್ತಿರುವುದು ಕಂಡು ಬಂದಿತ್ತು. ವೀಡಿಯೊದ ನೈಜತೆಯನ್ನು ಪರಿಶೀಲಿಸಿದ್ದ ಪೊಲೀಸರು, ಈ ಸುಳಿವನ್ನು ಆಧರಿಸಿ ತನಿಖೆಯನ್ನು ಕೈಗೊಂಡಿದ್ದರು. ಆ ವೀಡಿಯೊದಲ್ಲಿ ಶಂಕಿತರನ್ನು ಗುರುತಿಸಿದ್ದ ಪೊಲೀಸರು, ಶುಕ್ರವಾರ ರಾತ್ರಿ 8 ಗಂಟೆಗೆ ಶಂಕಿತ ಕಾರ್ಖಾನೆಯ ಮೇಲೆ ದಾಳಿ ನಡೆಸಿದ್ದರು.

ಪೊಲೀಸರು ಅಕ್ರಮ ಬಂದೂಕು ಕಾರ್ಖಾನೆಯನ್ನು ಮಹುವಾ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ್ ಪುರ ಗ್ರಾಮದಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಬಂದೂಕು ಶುಚಿಗೊಳಿಸುತ್ತಿದ್ದ ಮಹಿಳೆಯ ಪತಿ ಶಕ್ತಿ ಕಪೂರ್ ಸಖ್ವರ್ ಹಾಗೂ ಆಕೆಯ ಮಾವ ಬಿಹಾರಿಲಾಲ್ ರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಆಯುಧಗಳನ್ನು ತೋರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಹೇಳಲಾಗಿದೆ.

ದಾಳಿಯ ಸಂದರ್ಭದಲ್ಲಿ ಅರೆ ತಯಾರಿಗೊಂಡಿದ್ದ ಬಂದೂಕುಗಳು, 315 ಬೋರ್ ಬಂದೂಕು ಗಳು ಹಾಗೂ 32 ಬೋರ್ ಬಂದೂಕು ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ಶಕ್ತಿ ಕಪೂರ್ ವಶದಲ್ಲಿತ್ತು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News