ಅಸ್ಸಾಂ ಒಪ್ಪಂದವನ್ನು ಗುರುತಿಸುವ ಪೌರತ್ವ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2024-10-17 06:17 GMT

ಹೊಸದಿಲ್ಲಿ: ​ಜನವರಿ 1, 1966​ ರಿಂದ ಮಾರ್ಚ್ 25, 1971​ ರೊಳಗೆ ರಾಜ್ಯವನ್ನು ಪ್ರವೇಶಿಸಿರುವ ವಲಸಿಗರಿಗೆ ನಾಗರಿಕತ್ವ ಕೊಡುವ ಅಸ್ಸಾಂ ಸರ್ಕಾರ​ದ 1955 ರ ನಾಗರೀಕ ಕಾಯ್ದೆಯ ಸೆಕ್ಷನ್ 6A ನ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ. 

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಎಂಎಂ ಸುಂದ್ರೇಶ್, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಈ ತೀರ್ಪು ನೀಡಿದೆ. 4:1 ರ ಬಹುಮತದೊಂದಿಗೆ ಸುಪ್ರೀಂ ಪೀಠದ ತೀರ್ಪು ಹೊರಬಿದ್ದಿದೆ.

ನ್ಯಾಯಮೂರ್ತಿ ಪರ್ದಿವಾಲಾ ಅವರು ಸೆಕ್ಷನ್ 6ಎ ಅನ್ನು ಅಸಾಂವಿಧಾನಿಕ ಎಂದು ಭಿನ್ನಾಭಿಪ್ರಾಯದ ತೀರ್ಪು ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News