ಲಂಚ ಪ್ರಕರಣಗಳಲ್ಲಿ ಶಾಸಕರು, ಸಂಸದರಿಗೆ ಕಾನೂನು ಕ್ರಮದಿಂದ ವಿನಾಯಿತಿಯಿಲ್ಲ: ಸುಪ್ರೀಂ ಕೋರ್ಟ್‌

Update: 2024-03-04 05:34 GMT

ಹೊಸದಿಲ್ಲಿ: ಶಾಸನ ಸಭೆಗಳಲ್ಲಿ ಮತಕ್ಕಾಗಿ ಅಥವಾ ಭಾಷಣಕ್ಕಾಗಿ ಲಂಚ ಪಡೆದ ಪ್ರಕರಣಗಳಲ್ಲಿ ಸಂಸದರು ಮತ್ತು ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಏಳು ಸದಸ್ಯರ ಸಂವಿಧಾನಿಕ ಪೀಠ ಇಂದು ಮಹತ್ವದ ತೀರ್ಪು ನೀಡಿದೆ.

ಈ ಕುರಿತ ವಾದ ವಿವಾದಗಳನ್ನು ಆಲಿಸಿದ್ದ ಪೀಠ ಅಕ್ಟೋಬರ್‌ 5, 2023ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಲಂಚ ಪ್ರಕರಣಗಳಲ್ಲಿ ವಿನಾಯಿತಿಯ ಪ್ರಶ್ನೆಯೇ ಇಲ್ಲ ಹಾಗೂ ಸಂಸತ್ತಿನ ಸವಲತ್ತುಗಳಿವೆ ಎಂಬ ಮಾತ್ರಕ್ಕೆ ಸಂಸದರು ಅಥವಾ ಶಾಸಕರನ್ನು ಕಾನೂನಿನಿಗಿಂತ ಮೇಲಿರಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಇಂದು ಸರ್ವಾನುಮತದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌, “ಶಾಸನ ಸಭೆಯ ಸದಸ್ಯರು ಭ್ರಷ್ಟಾಚಾರ ನಡೆಸುವುದು ಅಥವಾ ಲಂಚ ಪಡೆಯುವುದು ಸಾರ್ವಜನಿಕ ಜೀವನದ ನೈತಿಕತೆಯನ್ನು ನಶಿಸುತ್ತದೆ,” ಎಂದು ಹೇಳಿದರು.

ಅಷ್ಟೇ ಅಲ್ಲದೆ ಸಂಸತ್ತು ಅಥವಾ ಶಾಸಕಾಂಗದ ಕಾರ್ಯನಿರ್ವಹಣೆಗೆ ಸಂಬಂಧಿಸದ ಯಾವುದೇ ಸವಲತ್ತನ್ನು ನೀಡುವುದು, ನೆಲದ ಕಾನೂನಿನಿಂದ ಅನಿರ್ಬಂಧಿತ ವಿನಾಯಿತಿಗಳನ್ನು ಆನಂದಿಸುವ ವರ್ಗವನ್ನು ರಚಿಸಿದಂತಾಗುವುದು ಎಂದು ಸುಪ್ರಿಂ ಕೋರ್ಟಿನ ಸಂವಿಧಾನಿಕ ಪೀಠ ಹೇಳಿದೆ.

ಭ್ರಷ್ಟಾಚಾರ ಮತ್ತು ಲಂಚಗುಳಿತನವ ಸಂವಿಧಾನದ ಆಶಯಗಳಿಗೆ ವಿನಾಶಕಾರಿಯಾಗಿವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News