ಜಾತಿಗಣತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ರಾಹುಲ್ ಗಾಂಧಿ
Update: 2024-04-24 07:57 GMT
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮನ್ನು ದೇಶಭಕ್ತರೆಂದು ಕರೆಸಿಕೊಳ್ಳುವವರು ಜಾತಿಗಣತಿಯ ಎಕ್ಸ್-ರೇ ಯಿಂದ ಭಯಗೊಂಡಿದ್ದಾರೆ ಎಂದರಲ್ಲದೆ ಜಾತಿಗಣತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಸಾಮಾಜಿಕ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್, ಅನ್ಯಾಯ ಎದುರಿಸುತ್ತಿರುವ ದೇಶದ ಶೇ 90ರಷ್ಟು ಜನರಿಗೆ ನ್ಯಾಯ ದೊರಕಿಸುವುದು ತಮ್ಮ ಜೀವನದ ಉದ್ದೇಶ ಎಂದು ಹೇಳಿದರು.
“ನಮ್ಮ ಸರ್ಕಾರ ರಚಿಸಿದ ತಕ್ಷಣ ಮೊದಲ ಕೆಲಸ ಜಾತಿಗಣತಿ ನಡೆಸುವುದು,” ಎಂದು ಅವರು ಹೇಳಿದರು.
ದೊಡ್ಡ ಉದ್ಯಮಿಗಳಿಗೆ ಸಾಲ ಮನ್ನಾದ ಮೂಲಕ ದೊರಕಿರುವ ರೂ 16 ಲಕ್ಷ ಕೋಟಿಯ ಒಂದು ಸಣ್ಣ ಭಾಗವನ್ನು ದೇಶದ ಶೇ 90ರಷ್ಟು ಜನತೆಗೆ ಮರಳಿ ನೀಡುವ ಉದ್ದೇಶವನ್ನು ಕಾಂಗ್ರೆಸ್ ಪ್ರಣಾಳಿಕೆ ಹೊಂದಿದೆ ಎಂದು ಅವರು ಹೇಳಿದರು.