1000ಕ್ಕೂ ಅಧಿಕ ಉದ್ಯೋಗಿಗಳನ್ನು ಕೈಬಿಟ್ಟ ಪೇಟಿಎಂ

Update: 2023-12-25 08:30 GMT

ಹೊಸದಿಲ್ಲಿ: ಪೇಟಿಎಂ ನ ಮಾತೃಸಂಸ್ಥೆಯಾಗಿರುವ ಒನ್‌ 97 ಕಮ್ಯುನಿಕೇಶನ್ಸ್‌ ಇತ್ತೀಚೆಗೆ 1000ಕ್ಕೂ ಅಧಿಕ ಉದ್ಯೋಗಿಗಳನ್ನು ಕೈಬಿಟ್ಟಿದೆ. ಹೀಗೆ ಲೇಆಫ್‌ ಮಾಡಲ್ಪಟ್ಟ ಉದ್ಯೋಗಿಗಳು ಕಂಪೆನಿಯ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ವೆಚ್ಚಗಳ ಕಡಿತ ಹಾಗೂ ವಿವಿಧ ವ್ಯವಹಾರಗಳ ಮರುಒಗ್ಗೂಡಿಸುವಿಕೆಯ ಉದ್ದೇಶದೊಂದಿಗೆ ಈ ಕ್ರಮಕೈಗೊಳ್ಳಲಾಗಿದೆ, ಕಳೆದ ಕೆಲ ತಿಂಗಳುಗಳ ಅವಧಿಯಲ್ಲಿ ಈ ಲೇಆಫ್‌ ನಡೆದಿದೆ ಎಂದು ತಿಳಿದು ಬಂದಿದೆ.

ಪೇಟಿಎಂನ ಒಟ್ಟು ಉದ್ಯೋಗಿಗಳ ಪೈಕಿ ಶೇ 10ರಷ್ಟು ಮಂದಿಯನ್ನು ಈ ಲೇಆಫ್‌ ಬಾಧಿಸಿದೆ. ಭದ್ರತೆಯಿಲ್ಲದ ಸಾಲಗಳ ಮೇಲೆ ಆರ್‌ಬಿಐ ನಿರ್ಬಂಧಗಳ ಹಿನ್ನೆಲೆಯಲ್ಲಿ ಪೇಟಿಎಂ ತನ್ನ ಗ್ರಾಹಕರಿಗೆ ಸಣ್ಣ ಸಾಲ ನೀಡಿಕೆ ಮತ್ತು ಈಗ ಖರೀದಿಸಿ ನಂತರ ಪಾವತಿಸಿ ವಿಭಾಗಗಳಿಂದ ಹಿಂದೆ ಸರಿದ ನಂತರದ ಬೆಳವಣಿಗೆ ಇದಾಗಿದೆ.

ಈ ವರ್ಷ ಭಾರತ ಮೂಲದ ಟೆಕ್‌ ಕಂಪೆನಿಯೊಂದು ಮಾಡಿದ ಅತ್ಯಂತ ದೊಡ್ಡ ಲೇಆಫ್‌ ಆಗಿದೆ. ಸಂಸ್ಥೆ ಪೇಟಿಎಂ ಪೋಸ್ಟ್‌ಪೇಯ್ಡ್‌ನಿಂದ ಹಿಂದೆ ಸರಿದ ಬೆನ್ನಲ್ಲೇ ಅದರ ಷೇರು‌ ಬೆಲೆ ಶೇ20ರಷ್ಟು ಕುಸಿತ ಕಂಡಿದೆ.

ಲೇಆಫ್‌ ಸಂಖ್ಯೆಯನ್ನು ಸಂಸ್ಥೆಯ ವಕ್ತಾರರು ನಿರಾಕರಿಸಿದ್ದರೂ ಉದ್ಯೋಗಿಗಳ ಮೇಲಿನ ವೆಚ್ಚದಲ್ಲಿ ಶೇ10ರಿಂದ ಶೇ15ರಷ್ಟು ಕಡಿತಗೊಳಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News