ಪೇಟಿಎಂ ಪೇಮೆಂಟ್ ಬ್ಯಾಂಕ್ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ರಾಜಿನಾಮೆ

Update: 2024-02-26 17:15 GMT

ವಿಜಯ್ ಶೇಖರ್ ಶರ್ಮಾ | Photo: NDTV 

ಹೊಸದಿಲ್ಲಿ: ತನ್ನ ಗ್ರಾಹಕ ಖಾತೆಗಳಿಗೆ ಮತ್ತಷ್ಟು ಠೇವಣಿಯನ್ನು ಸ್ವೀಕರಿಸಲು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ನೀಡಿದ್ದ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 15ರವರೆಗೆ ವಿಸ್ತರಿಸಿರುವ ಬೆನ್ನಿಗೇ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ತಮ್ಮ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಇದರೊಂದಿಗೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ತನ್ನ ಮಂಡಳಿಯನ್ನು ಪುನರ್ರಚಿಸಿದೆ ಎಂದು ಪೇಟಿಎಂನ ಮಾತೃ ಸಂಸ್ಥೆಯಾದ ಒನ್ 97 ಕಮ್ಯೂನಿಕೇಷನ್ಸ್ ಲಿಮಿಟೆಡ್ ಪ್ರಕಟಿಸಿದೆ ಎಂದು ndtv ವರದಿ ಮಾಡಿದೆ.

ವಿಜಯ್ ಶಂಕರ್ ಶರ್ಮಾ ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನ ಅರೆಕಾಲಿಕ ಅಧ್ಯಕ್ಷರಾಗಿದ್ದರು. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಒನ್ 97 ಕಮ್ಯೂನಿಕೇಶನ್ಸ್ ಲಿಮಿಟೆಡ್, "ಈ ಬದಲಾವಣೆಯನ್ನು ಸಾಧ್ಯವಾಗಿಸಲು ವಿಜಯ್ ಶಂಕರ್ ಶರ್ಮಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಮಂಡಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಹೊಸ ಅಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನಮಗೆ ಮಾಹಿತಿ ನೀಡಿದೆ" ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News