ಅಂಬೇಡ್ಕರ್‌ರಿಗೆ ನೀವು ಮಾಡಿದ ಅವಮಾನವನ್ನು ನಿಮ್ಮ ಸುಳ್ಳುಗಳಿಂದ ಬಚ್ಚಿಡಲು ಸಾಧ್ಯವಿಲ್ಲ: ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

Update: 2024-12-18 09:05 GMT

ಪ್ರಧಾನಿ ನರೇಂದ್ರ ಮೋದಿ (Photo: PTI)

ಹೊಸದಿಲ್ಲಿ: ಮಂಗಳವಾರ ರಾಜ್ಯಸಭೆಯಲ್ಲಿ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ಪ್ರತಿಭಟಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, "ಡಾ. ಅಂಬೇಡ್ಕರ್‌ ಅವರಿಗೆ ಈ ಹಿಂದೆ ಕಾಂಗ್ರೆಸ್ ಅವಮಾನಿಸಿದನ್ನು‌ ಸುಳ್ಳುಗಳಿಂದ ಮರೆಮಾಚಬಹುದು ಕಾಂಗ್ರೆಸ್ ಭಾವಿಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ತಮ್ಮ ದುರುದ್ದೇಶಪೂರ್ವಕ ಸುಳ್ಳುಗಳು ತಾವು ಹಲವಾರು ವರ್ಷಗಳಿಂದ ಮಾಡಿರುವ ಕುಕೃತ್ಯಗಳನ್ನು, ವಿಶೇಷವಾಗಿ ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನಗಳನ್ನು ಬಚ್ಚಿಡುತ್ತವೆ ಎಂದು ಕಾಂಗ್ರೆಸ್ ಭಾವಿಸಿದ್ದರೆ, ಅದು ದೊಡ್ಡ ತಪ್ಪು” ಎಂದು ಎಕ್ಸ್ ನಲ್ಲಿ ಮೋದಿ ಪೋಸ್ಟ್ ಮಾಡಿದ್ದಾರೆ.

“ಭಾರತದ ಜನತೆಯು ಪ್ರತಿ ಬಾರಿ ಒಂದು ವಂಶದ ನೇತೃತ್ವದ ಪಕ್ಷ ಹೇಗೆ ಅಂಬೇಡ್ಕರ್ ಪರಂಪರೆಗೆ ಮಸಿ ಬಳಿಯಲು ಯತ್ನಿಸಿತು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಅವಮಾನಿಸುತ್ತಲೇ ಬಂದಿತು ಎಂಬುದನ್ನು ನೋಡಿದ್ದಾರೆ” ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನು ನಿರಾಕರಿಸಿತ್ತು ಹಾಗೂ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಲು ಸ್ಥಳಾವಕಾಶ ನೀಡಲೂ ನಿರಾಕರಿಸಿತ್ತು ಎಂದೂ ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News