“ಬಾಬಾ ಸಾಹೇಬರಿಗೆ ಅವಮಾನಿಸುವುದನ್ನು ಭಾರತ ಸಹಿಸುವುದಿಲ್ಲ”: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

Update: 2024-12-18 08:23 GMT

ಅರವಿಂದ್ ಕೇಜ್ರಿವಾಲ್ (Photo: PTI)

ಹೊಸದಿಲ್ಲಿ: ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಇದನ್ನು ಭಾರತ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, “ಸಂಸತ್ತಿನಲ್ಲಿ ಅಂಬೇಡ್ಕರ್ ಅವರನ್ನು ಅಮಿತ್ ಶಾ ಹೇಗೆ ಹಾಸ್ಯ ಮಾಡುತ್ತಿದ್ದಾರೆ ನೋಡಿ. ಬಿಜೆಪಿಯವರು ಎಷ್ಟು ದುರಹಂಕಾರಿಗಳಾಗಿದ್ದಾರೆಂದರೆ, ಅವರು ಯಾವುದಕ್ಕೂ ಯಾರನ್ನೂ ಪರಿಗಣಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹೌದು, ಅಮಿತ್ ಶಾ ಅವರೆ, ಈ ದೇಶದ ಪ್ರತಿ ಮಕ್ಕಳಿಗೂ ಅಂಬೇಡ್ಕರ್ ದೇವರಿಗಿಂತ ಕಡಿಮೆ ಇಲ್ಲ. ಸತ್ತ ನಂತರ ಸ್ವರ್ಗ ಇರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಬಾಬಾ ಸಾಹೇಬರ ಸಂವಿಧಾನ ಇರದೆ ಹೋಗಿದ್ದರೆ, ನೀವು ದಬ್ಬಾಳಿಕೆಗೀಡಾದ, ಕೆಳಗೆ ತುಳಿಯಲ್ಪಟ್ಟ, ಬಡ ಮತ್ತು ದಲಿತರಿಗೆ ಈ ಭೂಮಿಯ ಮೇಲೆ ಬದುಕಲು ಅವಕಾಶವನ್ನೇ ನೀಡುತ್ತಿರಲಿಲ್ಲ” ಎಂದೂ ವಾಗ್ದಾಳಿ ನಡೆಸಿದ್ದಾರೆ.

“ಬಾಬಾ ಸಾಹೇಬರಿಗೆ ಅವಮಾನಿಸುವುದನ್ನು ಭಾರತ ಸಹಿಸುವುದಿಲ್ಲ” ಎಂದೂ ಅವರು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News