ಕೇಂದ್ರ ಸರಕಾರಿ ಉದ್ಯೋಗಿಗಳ ತುಟ್ಟಿಭತ್ತೆ 2ಶೇ. ಏರಿಕೆ

Update: 2025-03-28 21:05 IST
ಕೇಂದ್ರ ಸರಕಾರಿ ಉದ್ಯೋಗಿಗಳ ತುಟ್ಟಿಭತ್ತೆ 2ಶೇ. ಏರಿಕೆ

ಸಾಂದರ್ಭಿಕ ಚಿತ್ರ | PC : PTI

  • whatsapp icon

ಹೊಸದಿಲ್ಲಿ: ಕೇಂದ್ರ ಸರಕಾರಿ ಉದ್ಯೋಗಿಗಳ ತುಟ್ಟಿಭತ್ತೆಯನ್ನು 2 ಶೇಕಡದಷ್ಟು ಏರಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.

ಇದರೊಂದಿಗೆ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ನೀಡಲಾಗುತ್ತಿರುವ ತುಟ್ಟಿಭತ್ತೆಯ ಪ್ರಮಾಣ 53 ಶೇಕಡದಿಂದ 55 ಶೇಕಡಕ್ಕೆ ಏರಿದೆ. 8ನೇ ವೇತನ ಆಯೋಗದ ಮುನ್ನ ಉದ್ಯೋಗಿಗಳ ವೇತನ ಹೆಚ್ಚಳವನ್ನು ಇದು ಖಾತರಿಪಡಿಸುತ್ತದೆ.

ಇದಕ್ಕೂ ಮೊದಲು 2024 ಜುಲೈಯಲ್ಲಿ ತುಟ್ಟಿಭತ್ತೆಯನ್ನು ಹೆಚ್ಚಳಗೊಳಿಸಲಾಗಿತ್ತು. ತುಟ್ಟಿಭತ್ತೆ 50 ಶೇಕಡದಿಂದ 53 ಶೇಕಡಕ್ಕೆ ಏರಿಕೆ ಮಾಡಲಾಗಿತ್ತು. ಹೆಚ್ಚುತ್ತಿರುವ ಹಣದುಬ್ಬರದಿಂದ ಕೇಂದ್ರ ಸರಕಾರಿ ಉದ್ಯೋಗಿಗಳನ್ನು ಪಾರು ಮಾಡುವುದಕ್ಕಾಗಿ ವರ್ಷಕ್ಕೆ ಎರಡು ಬಾರಿ ಸರಕಾರವು ತುಟ್ಟಿಭತ್ತೆಯನ್ನು ಹೆಚ್ಚಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News