ಜಿಲ್ಲಾಧಿಕಾರಿ ವಶಕ್ಕೆ ಪಡೆಯುವ ವೇಳೆ ಬಟ್ಟೆ ಹರಿದ ಪೊಲೀಸರು : ಆರೋಪ

Update: 2023-10-09 18:41 GMT

Photo: twitter/NikhilPatidarr

ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ, ಸೋಮವಾರ ಭೋಪಾಲ್‌ನಲ್ಲಿ ಛತ್ತರ್‌ಪುರ ಜಿಲ್ಲಾಧಿಕಾರಿ ನಿಶಾ ಬೇಂಗ್ರೆ ಅವರ 'ನ್ಯಾಯ ಪಾದ ಯಾತ್ರೆ' ವೇಳೆ ಪೊಲೀಸರು ಬಲವಂತವಾಗಿ ವಶಕ್ಕೆ ಪಡೆಯುವ ವೇಳೆ ಅವರ ಬಟ್ಟೆ ಹರಿದಿದೆ ಎಂದು ಆರೋಪಿಸಲಾಗಿದೆ.

ಭೋಪಾಲ್‌ನ ಬೋರ್ಡ್ ಚೌಕದ ಬಳಿ ಈ ಘರ್ಷಣೆ ಸಂಭವಿಸಿದೆ ಎಂದು ವರದಿಯಾಗಿದೆ. ಅಲ್ಲಿ ಬೇಂಗ್ರೆ ಅವರು ಕೆಲವು ಕಾಂಗ್ರೆಸ್ ನಾಯಕರೊಂದಿಗೆ ಡಾ.ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಲು ಉದ್ದೇಶಿಸಿದ್ದರು.

ಆಮ್ಲಾದಿಂದ ಭೋಪಾಲ್‌ಗೆ ಪಾದಯಾತ್ರೆ ನಡೆಸುತ್ತಿದ್ದ ಬೇಂಗ್ರೆ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ದೇಶಿಸಿರುವುದರಿಂದ ರಾಜೀನಾಮೆಯನ್ನು ಅಂಗೀಕರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಬೋರ್ಡ್ ಚೌಕ ತಲುಪಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ಪೊಲೀಸರು ಆಕೆಯ ಮೇಲೆ ಆರೋಪ ಹೊರಿಸಿ ಬಲವಂತವಾಗಿ ಆಕೆಯನ್ನು ಬಂಧಿಸಲು ಯತ್ನಿಸಿದ್ದು, ದೈಹಿಕ ಘರ್ಷಣೆಗೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಬೇಂಗ್ರೆ ಅವರ ಬಟ್ಟೆ ಹರಿದಿದೆ.

ಈ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ ಬೇಂಗ್ರೆ, "ನನ್ನನ್ನು ಎಲ್ಲಾ ಧರ್ಮದವರ ಪರವಾಗಿ ಪ್ರಾರ್ಥನೆ ಸಲ್ಲಿಸುವುದರಿಂದ ತಡೆಯಲಾಗಿದೆ. ನಾನು ಇಡೀ ಸಮಾಜವನ್ನು ನನ್ನೊಂದಿಗೆ ಕರೆದೊಯ್ಯಲು ಬಯಸುತ್ತೇನೆ. ರಾಜ್ಯ ಸರ್ಕಾರವು ಮೂಲಭೂತವಾದಿ ಸಿದ್ಧಾಂತದೊಂದಿಗೆ ಕೆಲಸ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕ ಪಿಸಿ ಶರ್ಮಾ ಮತ್ತು ಭೋಪಾಲ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋನು ಸಕ್ಸೇನಾ ಕೂಡ ಪ್ರತಿಭಟನೆಯ ಭಾಗವಾಗಿದ್ದರು. ಘಟನೆಯ ನಂತರ ನಿಶಾ ಬೇಂಗ್ರೆ ಮತ್ತು ಮೋನು ಸಕ್ಸೇನಾ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಸಕ್ಸೇನಾ ತಮ್ಮ ಹೇಳಿಕೆಯಲ್ಲಿ, ಪೊಲೀಸರು ಬೇಂಗ್ರೆ ಅವರ ಬಟ್ಟೆಗಳನ್ನು ಹರಿದಿದ್ದಾರೆ ಎಂದು ಆರೋಪಿಸಿದ್ದಾರೆ. ಗದ್ದಲದ ನಡುವೆಯೇ ಅಂಬೇಡ್ಕರ್ ಅವರ ಭಾವಚಿತ್ರವೂ ಹರಿದಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News