ತನ್ನ ಭಾಷಣವನ್ನು ಅನುವಾದಿಸಲು ತಡವರಿಸಿದ ಬಾಲಕಿಗೆ ಧೈರ್ಯ ತುಂಬಿದ ರಾಹುಲ್ ಗಾಂಧಿ

Update: 2023-12-02 17:47 GMT

ರಾಹುಲ್ ಗಾಂಧಿ | Photo: @mrs_roh08\X

ತಿರುವನಂತಪುರಂ: ರಾಹುಲ್ ಗಾಂಧಿ ತಮ್ಮ ಸರಳ ಹಾಗೂ ಸಜ್ಜನಿಕೆಯ ನಡವಳಿಕೆಗಳಿಂದ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಾಗುತ್ತಿದ್ದಾರೆ.

ಕಳೆದ ವಾರ ಕೇರಳದಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಬಾಲಕಿಯೊಬ್ಬಳು ರಾಹುಲ್ ಗಾಂಧಿಯವರ ಭಾಷಣವನ್ನು ಅನುವಾದಿಸಲು ಕೆಲವೊಮ್ಮೆ ತಡವರಿಸಿದಾಗ, ರಾಹುಲ್ ಗಾಂಧಿ ಆಕೆಗೆ ತುಂಬಿದ ಧೈರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಸಮಾರಂಭವನ್ನುದ್ದೇಶಿಸಿ ರಾಹುಲ್ ಗಾಂಧಿ ಮಾಡುತ್ತಿದ್ದ ಭಾಷಣವನ್ನು ಮಲಯಾಳಂಗೆ ಅನುವಾದಿಸಲು ಬಾಲಕಿಯನ್ನು ನಿಯೋಜಿಸಲಾಗಿತ್ತು. ಆಕೆ ಮಧ್ಯೆ ಮಧ್ಯೆ ರಾಹುಲ್ ಗಾಂಧಿ ಭಾಷಣವನ್ನು ಅನುವಾದಿಸಲು ತಡವರಿಸುತ್ತಿದ್ದಾಗ, ಆಕೆಗೆ ಧೈರ್ಯ ತುಂಬಿದ್ದ ರಾಹುಲ್ ಗಾಂಧಿ, “ಗಾಬರಿಗೊಳ್ಳಬೇಡಿ, ಸುಧಾರಿಸಿಕೊಳ್ಳಿ” ಎಂದು ಆಕೆಯೆಡೆಗೆ ನಗುತ್ತಾ ಹೇಳಿದ್ದರು. ರಾಹುಲ್ ಗಾಂಧಿಯ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಭಾಷಣದ ಕೊನೆಯಲ್ಲಿ, “ಇಂತಹ ಪರಿಸ್ಥಿತಿಗಳಲ್ಲಿ ಭಾಷಣಗಳನ್ನು ತರ್ಜುಮೆ ಮಾಡುವುದು ಸುಲಭದ ಕೆಲಸವಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದರು. ಆ ಯುವತಿಯು ಆ ಮಾತನ್ನು ಅನುವಾದಿಸಿದಾಗ, “ನೀನು ತರ್ಜುಮೆ ಮಾಡುವ ಕೆಲಸವನ್ನು ಚೆನ್ನಾಗಿ ಮಾಡಿದ್ದೀಯ ಎಂದು ನನಗನ್ನಿಸುತ್ತಿದೆ” ಎಂದು ಆಕೆಯನ್ನು ರಾಹುಲ್ ಗಾಂಧಿ ಶ್ಲಾಘಿಸಿದ್ದರು. ಅದಕ್ಕೆ ಪ್ರತಿಯಾಗಿ ಆ ಬಾಲಕಿಯು ರಾಹುಲ್ ಗಾಂಧಿಗೆ ಧನ್ಯವಾದ ತಿಳಿಸಿದ್ದಳು.

ರಾಹುಲ್ ಗಾಂಧಿಯವರು ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಾಲಕಿಗೆ ಯಾವುದೇ ಮುಜುಗರವಾಗದಂತೆ ನೋಡಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆಯನ್ನು ಜನರು ಶ್ಲಾಘಿಸಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲಿ ರಾಹುಲ್ ಗಾಂಧಿ ಹಾಗೂ ಆ ಬಾಲಕಿ ಮುಗುಳ್ನಗುತ್ತಿರುವುದನ್ನು ಕಾಣಬಹುದಾಗಿದೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕೇರಳದ ಆದಿವಾಸಿ ಮಹಿಳೆಯರಿಗೆ ನೆರವು ನೀಡುವ ಕುರಿತು ಮಾತನಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News