ಶೀಘ್ರ ಎನ್‌ಡಿಟಿವಿ ತೊರೆಯಲಿರುವ ಸಂಕೇತ್‌ ಉಪಾಧ್ಯಾಯ

Update: 2023-10-18 11:12 GMT

twitter/sanket

ಹೊಸದಿಲ್ಲಿ: ಎನ್‌ಡಿಟಿವಿಯ ಕನ್ಸಲ್ಟಿಂಗ್‌ ಎಡಿಟರ್‌ ಆಗಿರುವ ಸಂಕೇತ್‌ ಉಪಾಧ್ಯಾಯ ನಾಲ್ಕು ವರ್ಷಗಳ ಸೇವೆಯ ನಂತರ ಈಗ ಎನ್‌ಡಿಟಿವಿಯನ್ನು ಸದ್ಯದಲ್ಲಿಯೇ ತೊರೆಯಲಿದ್ದಾರೆ. ಈ ಕುರಿತು ಅವರೇ ಸ್ವತಃ ಟ್ವೀಟ್‌ ಮಾಡಿದ್ದು ತಾವು ಶೀಘ್ರ ಹೊಸ ವೃತ್ತಿಪರ ವಿಳಾಸ ಹೊಂದಲಿರುವುದಾಗಿ ತಿಳಿಸಿದ್ದಾರೆ.

ಉಪಾಧ್ಯಾಯ ಈ ಹಿಂದೆ ಸಿಎನ್‌ಎನ್‌ ನ್ಯೂಸ್‌ 18ನಲ್ಲಿ ಡೆಪ್ಯುಟಿ ಎಕ್ಸಿಕ್ಯುಟಿವ್‌ ಎಡಿಟರ್‌ ಆಗಿ ಸೇವೆ ಸಲ್ಲಿಸಿದ್ದರು.

ಅವರ ಮುಂದಿನ ನಡೆಯ ಬಗ್ಗೆ ತಿಳಿದಿಲ್ಲವಾದರೂ ಎನ್‌ಡಿಟಿವಿ ತೊರೆಯುವ ಕುರಿತು ಟ್ವೀಟ್‌ ಮಾಡುವ ಮೊದಲು ಅವರು ಕೂ ಆಪ್‌ನಲ್ಲಿ ವೀಡಿಯೋವೊಂದನ್ನು ಶೇರ್‌ ಮಾಡಿ ತಮ್ಮ ಫಾಲೋವರ್ಸ್‌ಗೆ ಈ ವೇದಿಕೆಯನ್ನು ತಮ್ಮೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹೇಳಿದ್ದರು.

ಒಬ್ಬರ ಅಭಿಪ್ರಾಯವನ್ನು ತಿಳಿಸಲು ಎರಡು ವಿಧಗಳಿವೆ. ಒಂದು ಸುಲಭ ಮತ್ತು ಜನಪ್ರಿಯ ವಿಧಾನವಾಗಿದ್ದರೆ ಇನ್ನೊಂದು ಕಷ್ಟಕರ ಮತ್ತು ಗೌರವಯುತ ವಿಧಾನ ಎಂದು ಅವರು ಹೇಳಿದ್ದಾರೆ.

ಉಪಾಧ್ಯಾಯ ಈ ಹಿಂದೆ ಎನ್‌ಡಿಟಿವಿಯಲ್ಲಿ 2005 ಹಾಗೂ 2008 ತನಕ ಕೆಲಸ ಮಾಡಿ ನಂತರ ಟೈಮ್ಸ್‌ ನೌ ವಾಹಿನಿಯ ವರದಿಗಾರರಾಗಿ ಸೇರಿದ್ದರು.

ಅದಾನಿ ಸಮೂಹ ಈ ವಾಹಿನಿಯನ್ನು ಈ ವಾಹಿನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಎನ್‌ಡಿಟಿವಿಯ ಸ್ಥಾಪಕರಾದ ಪ್ರಣಯ್ ರಾಯ್, ರಾಧಿಕಾ ರಾಯ್ ಹಾಗು ಪತ್ರಕರ್ತರಾದ ರವೀಶ್ ಕುಮಾರ್‌ , ಶ್ರೀನಿವಾಸನ್‌ ಜೈನ್‌, ನಿಧಿ ರಾಜ್ದಾನ್‌, ಸಾರಾ ಜೇಕಬ್, ಗ್ರೂಪ್‌ ಅಧ್ಯಕ್ಷೆ ಸುಪರ್ಣಾ ಸಿಂಗ್‌, ಮುಂತಾದವರು ರಾಜೀನಾಮೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News