“2024ರ ಹೋರಾಟವು ಭ್ರಷ್ಟರು ಮತ್ತು ಭಾರತದ ನಡುವೆ” : ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಟ್ವೀಟ್‌

Update: 2024-03-25 18:11 GMT

ಮಹುಆ ಮೊಯಿತ್ರಾ | Photo: x \ @MahuaMoitra

ಹೊಸದಿಲ್ಲಿ : ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ 2024ರ ಹೋರಾಟವು ಭ್ರಷ್ಟರು ಮತ್ತು ಭಾರತದ ನಡುವೆ ಎಂದು ಬರೆದಿದ್ದಾರೆ.

ಎನ್ ಡಿ ಎ ನಲ್ಲಿರುವ ಹಗರಣಗಳ ಪಟ್ಟಿ ನೀಡಿರುವ ಅವರು ಬಿಜೆಪಿಯು ಭ್ರಷ್ಟರಿಗೆ ಸುರಕ್ಷಿತ ತಾಣವಾಗಿದೆ ಎಂದು ಹೇಳಿದ್ದಾರೆ. ಮಹುವಾ ಮೊಯಿತ್ರಾ ಅವರು ತಮಮ್‌ ಟ್ವೀಟ್‌ ನಲ್ಲಿ ಎನ್‌ ಡಿ ಎ ಭ್ರಷ್ಟಾಚಾರಗಳ ಕುರಿತು ಅವರು ಕೆಲವೊಂದು ವಿವರಗಳನ್ನು ಹಂಚಿಕೊಂಡಿದ್ದಾರೆ.

“► ಕರ್ನಾಟಕದಲ್ಲಿ 35000 ಕೋಟಿ ರೂಪಾಯಿ ಗಣಿ ಹಗರಣದ ಆರೋಪಿ ಬಿಜೆಪಿಗೆ ಸೇರಿದ್ದಾರೆ.

► ಮಹಾರಾಷ್ಟ್ರದಲ್ಲಿ 70,000 ಕೋಟಿ ನೀರಾವರಿ ಹಗರಣ ಆರೋಪಿ ಎನ್‌ಡಿಎಗೆ ಸೇರಿದ್ದಾರೆ.

► ಬಂಗಾಳದಲ್ಲಿ ಶಾರದಾ ಚಿಟ್‌ಫಂಡ್‌ ಹಗರಣ (2500 ಕೋಟಿ) ಆರೋಪಿ ಬಿಜೆಪಿಗೆ ಸೇರಿದ್ದಾರೆ.

► ಅಸ್ಸಾಂನಲ್ಲಿ ಜಲ ಹಗರಣ ಆರೋಪಿ ಬಿಜೆಪಿಯಲ್ಲಿದ್ದಾರೆ.

► ಗುಜರಾತ್‌ನಲ್ಲಿ ಚೊಟ್ಟಾ ಉದೇಪುರ್‌ನ ಅಕ್ರಮ ಮದ್ಯ ಮಾಫಿಯಾ ವ್ಯಕ್ತಿ ಬಿಜೆಪಿ ಸೇರಿದ್ದಾರೆ. ಗುಜರಾತ್‌ನಲ್ಲಿ ಅಕ್ರಮ ಮದ್ಯ ವ್ಯವಹಾರ ರೂ 25,000 ಕೋಟಿಗೂ ಅಧಿಕವಾಗಿದೆ.

► ದಿಲ್ಲಿಯಲ್ಲಿ ದಿಲ್ಲಿ ಮದ್ಯ ಹಗರಣದ ಪ್ರಮುಖ ಆರೋಪಿ ಎನ್ನಲಾದ ವ್ಯಕ್ತಿ ಆಂಧ್ರ ಪ್ರದೇಶದಿಂದ ಎನ್‌ಡಿಎ ಲೋಕಸಭಾ ಅಭ್ಯರ್ಥಿ, ಇನ್ನೊಬ್ಬ ಪ್ರಮುಖ ಆರೋಪಿ ಬಿಜೆಪಿಗೆ 60 ಕೋಟಿ ರೂ. ದೇಣಿಗೆ ನೀಡಿದ್ದಾರೆ.

► ಮಧ್ಯ ಪ್ರದೇಶದಲ್ಲಿ ವ್ಯಾಪಂ ಹಗರಣ ಆರೋಪಿಗಳು ಬಿಜೆಪಿಯಲ್ಲಿದ್ದಾರೆ.

► ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ಹಗರಣ ಅಪರಾಧಿಯ ಪತ್ನಿ ಬಿಜೆಪಿ ಸೇರಿ ಈಗ ಲೋಕಸಭಾ ಅಭ್ಯರ್ಥಿಯಾಗಿದ್ದಾರೆ.

► ಆಂಧ್ರಪ್ರದೇಶದಲ್ಲಿ 114 ಫೈಬರ್‌ನೆಟ್‌ ಹಗರಣದ ಆರೋಪಿ ಈಗ ಎನ್‌ಡಿಎ ಭಾಗವಾಗಿದ್ದಾರೆ.

2024 ರ ಹೋರಾಟವು ಭ್ರಷ್ಟಾಚಾರ Vs ಇಂಡಿಯಾ ನಡುವೆ” ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News