2018 ರಲ್ಲಿ ಪ್ರಕಟಗೊಂಡಿದ್ದ ಕೃತಿಯ ಲೇಖಕ ಹಾಗೂ ಸಂಪಾದಕರ ವಿರುದ್ಧ ಎಫ್‍ಐಆರ್ ದಾಖಲಿಸಿದ ಮಣಿಪುರ ಪೊಲೀಸರು

Update: 2023-08-11 18:02 GMT

ಸಾಂದರ್ಭಿಕ ಚಿತ್ರ.| Photo: PTI

ಇಂಫಾಲ: 2018ರಲ್ಲಿ ಪ್ರಕಟಗೊಂಡಿದ್ದ ಕೃತಿಯೊಂದು ಮಣಿಪುರದ ಇತಿಹಾಸವನ್ನು ವಿರೂಪಗೊಳಿಸಿದೆ ಎಂಬ ದೂರನ್ನು ಆಧರಿಸಿ ಮಣಿಪುರ ಪೊಲೀಸರು ಆ ಕೃತಿಯ ಲೇಖಕ ಹಾಗೂ ಇಬ್ಬರು ಸಂಪಾದಕರ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ ಎಂದು thewire.in ವರದಿ ಮಾಡಿದೆ.

‘The Anglo-Kuki War 1917-1919: A Frontier Uprising Against Imperialism During the First World War’ಎಂಬ ಕೃತಿಯನ್ನು ನಿವೃತ್ತ ಕರ್ನಲ್ ಡಾ. ವಿಜಯ್ ಚೆಂಜಿ ರಚಿಸಿದ್ದರು. ಈ ಕೃತಿಯನ್ನು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಚಾರಿತ್ರಿಕ ಅಧ್ಯಯನಗಳ ಕೇಂದ್ರ ಮತ್ತು ಕಾನೂನು ಮತ್ತು ಆಡಳಿತ ಅಧ್ಯಯನ ಕೇಂದ್ರದಲ್ಲಿ ಬೋಧಿಸುವ ಸಹಾಯಕ ಪ್ರಾಧ‍್ಯಾಪಕರಾದ ಜಾಂಗ್ ಖೊಮಾಂಗ್ ಗೈಟೆ ಹಾಗೂ ಥೋಂಗ್ ಖೊಲಾಲ್ ಹವೋಕಿಪ್ ಅವರು ಸಂಪಾದಿಸಿದ್ದರು ಎಂದು The Chronicle News ವರದಿ ಮಾಡಿದೆ.

ಈ ಸಂಬಂಧ ಎರಡು ಪ್ರಾಥಮಿಕ ಮಾಹಿತಿ ವರದಿಗಳು ದಾಖಲಾಗಿವೆ. ಆಗಸ್ಟ್ 7ರಂದು ಗೈಟೆ ಹಾಗೂ ಹಾವೋಕಿಪ್ ವಿರುದ್ಧ ಒಂದು ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿದ್ದರೆ, ಆಗಸ್ಟ್ 9ರಂದು ಲೇಖಕ ಚೆಂಜಿ ವಿರುದ್ಧ ಮತ್ತೊಂದು ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿದೆ ಎಂದು scroll.in ವರದಿ ಮಾಡಿದೆ.

ಈ ಕೃತಿಯು 2018ರಲ್ಲಿ ಪ್ರಕಟಗೊಂಡಿತ್ತು.

ಉಖ್ರುಲ್, ಇಂಫಾಲ್ ಪೂರ್ವ ಹಾಗೂ ಇಂಫಾಲ್ ಪಶ‍್ಚಿಮ ಭಾಗದ ಗ್ರಾಮಗಳ ನಿವಾಸಿಗಳು ದಾಖಲಿಸಿರುವ ದೂರಿನಲ್ಲಿ, ಕುಕಿ ಸಮುದಾಯದ ಬಂಡಾಯವನ್ನು ಆಂಗ್ಲರು ಹಾಗೂ ಕುಕಿ ಸಮುದಾಯದ ನಡುವಿನ ಯುದ್ಧ ಎಂದು ಬಿಂಬಿಸುವ ಮೂಲಕ ಸಾರ್ವಜನಿಕ ಶಾಂತಿಗೆ ವಿರುದ್ಧವಾದ ವಾತಾವರಣವನ್ನು ಸುಳ್ಳು ಪ್ರತಿಪಾದನೆಗಳ ಮೂಲಕ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News