ಮಹಾರಾಷ್ಟ್ರ | 2019ರ ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ಬಿಜೆಪಿ ವಿಫಲ: ವರದಿ

Update: 2024-11-08 10:26 GMT

ಸಾಂದರ್ಭಿಕ ಚಿತ್ರ | PTI


 

ಮಹಾರಾಷ್ಟ್ರ: ಮಹಾಯುತಿ ಮೈತ್ರಿ ಸರ್ಕಾರದ ಭಾಗವಾಗಿರುವ ಬಿಜೆಪಿ 2019ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಆರೋಗ್ಯ ಮತ್ತು ರೈತ ಕಲ್ಯಾಣದ ಬಗ್ಗೆ ನೀಡಿದ ಭರವಸೆ ಸೇರಿ ವಿವಿಧ ಭರವಸೆಗಳನ್ನು ಈಡೇರಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಮಹಾಯುತಿ ಮೈತ್ರಿಯಲ್ಲಿ ಬಿಜೆಪಿಯ ಹೊರತಾಗಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ ಸಿಪಿ ಬಣವಿದೆ.

ಮುಂಬೈ ವೋಟ್ಸ್ ಡಾಟ್ ಕಾಮ್ (MumbaiVotes.com) ಈ ಕುರಿತು ಅಧ್ಯಯನ ನಡೆಸಿದ್ದು, 2019ರ ವಿಧಾನಸಭೆ ಚುನಾವಣೆ ಮೊದಲು ಬಿಜೆಪಿ ನೀಡಿದ ಭರವಸೆಯನ್ನು, ಪ್ರಣಾಳಿಕೆಯನ್ನು ಮತ್ತು ನಿಜವಾಗಿ ಮಾಡಿದ ಕೆಲಸವನ್ನು ವಿಶ್ಲೇಷಿಸಿದೆ. 2019ರಲ್ಲಿ ಇಂಧನದ ಬಗ್ಗೆ ಐದು ಭರವಸೆಗಳು, ಕಾರ್ಮಿಕರ ಬಗ್ಗೆ 7 ಭರವಸೆಗಳು, ಸಾರಿಗೆಗೆ ಸಂಬಂಧಿಸಿ 16 ಮತ್ತು ನೀರಿಗೆ ಸಂಬಂಧಿಸಿದ 8 ಭರವಸೆಗಳನ್ನು ನೀಡಿದೆ ಎಂದು ಪತ್ತೆಹಚ್ಚಿದೆ. ಬಿಜೆಪಿಯ ಪ್ರಣಾಳಿಕೆಯಲ್ಲಿನ ಕೃಷಿ ಸಂಬಂಧಿತ 74% ಉದ್ದೇಶಿತ ಭರವಸೆಗಳಲ್ಲಿ 50% ಕ್ಕಿಂತ ಕಡಿಮೆ ಪೂರ್ತಿಗೊಳಿಸಲಾಗಿದೆ. ಯಾವುದೇ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸಿಲ್ಲ ಎಂದು ವರದಿಯು ತಿಳಿಸಿದೆ.

ಪ್ರಣಾಳಿಕೆಯಲ್ಲಿನ 34 ರಲ್ಲಿ 23 ಅಥವಾ 68% ಭರವಸೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅಧ್ಯಯನವು ತಿಳಿಸಿದೆ. ಅಧ್ಯಯನದ ಪ್ರಕಾರ, ಸೌರ ಪವರ್ ಗ್ರಿಡ್‌ಗಳನ್ನು ಬಳಸುವ ರೈತರಿಗೆ ದಿನಕ್ಕೆ 12 ಗಂಟೆಗಳ ಕಾಲ ವಿದ್ಯುತ್ ಸೇರಿದಂತೆ ಪ್ರಮುಖ ಭರವಸೆಗಳನ್ನು ಕಡೆಗಣಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭರವಸೆ ನೀಡಿದಂತೆ 2020 ಮತ್ತು 2024ರ ನಡುವೆ ಮಹಾರಾಷ್ಟ್ರದಲ್ಲಿ ರೈತರ ಆದಾಯ ದ್ವಿಗುಣಗೊಂಡಿಲ್ಲ ಎಂದು ಹೇಳಿದೆ.

2019ರ ಚುನಾವಣೆ ವೇಳೆ ಬಿಜೆಪಿ ಕನಿಷ್ಠ 15,000 ಆರೋಗ್ಯ ಕೇಂದ್ರಗಳ ಸ್ಥಾಪನೆ ಬಗ್ಗೆ ಭರವಸೆ ನೀಡಿತ್ತು. ಆದರೆ 2019ರಿಂದ ಯಾವುದೇ ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿಲ್ಲ ಎಂದು ವರದಿಯು ಬಹಿರಂಗಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News