ಮೂರನೇ ಏಕದಿನ ಪಂದ್ಯ | ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 142 ರನ್ ಗಳ ಜಯ

ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಭಾರತ ತಂಡವು 357 ರನ್ ಗಳ ಗುರಿ ನೀಡಿತು.
ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 357 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಇನ್ನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ 6.2 ಓವರ್ ನಲ್ಲಿ 22 ಎಸೆತಗಳಲ್ಲಿ 8 ಬೌಂಡರಿ ನೆರವಿನೊಂದಿಗೆ 34 ರನ್ ಬಾರಿಸಿ ಅರ್ಷದೀಪ್ ಸಿಂಗ್ ಬೌಲ್ ಗೆ ನಾಯಕ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಔಟಾದರು. 8.4 ಓವರ್ ನಲ್ಲಿ ಫಿಲ್ ಸಾಲ್ಟ್ 21 ಎಸೆತಗಳಲ್ಲಿ 4 ಬೌಂಡರಿ ನೆರವಿನೊಂದಿಗೆ 23 ರನ್ ಬಾರಿಸಿ ಅರ್ಷದೀಪ್ ಸಿಂಗ್ ಬೌಲ್ ಗೆ ಅಕ್ಷರ್ ಪಟೇಲ್ ಗೆ ಕ್ಯಾಚ್ ನೀಡಿ ಔಟಾಗಿ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದರು.
ನಂತರ ಕ್ರಮಾಂಕದಲ್ಲಿ ಬಂದ ಟಾಮ್ ಬ್ಯಾಂಟನ್ ಮತ್ತು ಜೋ ರೂಟ್ ಆಟದಲ್ಲಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರೂ, ಟಾಮ್ ಬ್ಯಾಂಟನ್ 17.6 ಓವರ್ ನಲ್ಲಿ 41 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸ್ ನೆರವಿನೊಂದಿಗೆ 38 ರನ್ ಹೊಡೆದು ಕುಲದೀಪ್ ಯಾದವ್ ಬೌಲ್ ಗೆ ಕೆ.ಎಲ್.ರಾಹುಲ್ ಗೆ ಕ್ಯಾಚ್ ನೀಡಿ ಔಟಾದರೆ, ಜೋ ರೂಟ್ 29 ಎಸೆತಗಳಲ್ಲಿ 2 ಬೌಂಡರಿ ನೆರವಿನೊಂದಿಗೆ 24 ರನ್ ಹೊಡೆದು ಅಕ್ಷರ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು.
ನಂತರ ಕ್ರಮಾಂಕದಲ್ಲಿ ಬಂದ ಹ್ಯಾರಿ ಬ್ರೂಕ್, ನಾಯಕ ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್ಸ್ಟೋನ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್ ಯಾವುದೇ ಉತ್ತಮ ಪ್ರದರ್ಶನ ನೀಡದೇ ಇಂಗ್ಲೆಂಡ್ ತಂಡವು ಆಲೌಟ್ ಆಯಿತು
ಭಾರತದ ಬೌಲರ್ ಗಳಾದ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ತಲಾ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
ಮೂರು ಏಕದಿನ ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡವು ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ.