ಉತ್ತರ ಪ್ರದೇಶ: ಪೊಲೀಸ್ ಅಧಿಕಾರಿ ಮನೆಯಲ್ಲಿ ಅಪ್ರಾಪ್ತ ಯುವಕ ಸಾವು

Update: 2024-10-15 04:19 GMT

ಮುಝಫರ್ ನಗರ: ಬಾಲಕಿಯೊಬ್ಬಳನ್ನು ಅಪಹರಿಸಿದ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ 16 ವರ್ಷ ವಯಸ್ಸಿನ ಯುವಕ ಸೋಮವಾರ ಅಧಿಕಾರಿಯ ಮನೆಯಲ್ಲಿ ಮೃತಪಟ್ಟಿದ್ದಾನೆ. ಘಟನೆಯ ಬೆನ್ನಲ್ಲೇ ನಾಲ್ಕು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಅಪ್ತಾಪ್ತ ವಯಸ್ಸಿನ ಯುವಕ ಬಿಜನೋರ್ನ ಬಾಲಕಿಯ ಜತೆ ಓಡಿಹೋಗಿದ್ದ ಎನ್ನಲಾಗಿದ್ದು, ಬಾಲಕಿಯ ಕುಟುಂಬದವರು ಈ ಬಗ್ಗೆ ಭಾನುವಾರ ದೂರು ನೀಡಿದ್ದರು. ಭಾನುವಾರ ರಾತ್ರಿ ಅಂಬಾಲಾ ಬಳಿ ಈ ಜೋಡಿಯನ್ನು ಪೊಲೀಸರು ಪತ್ತೆ ಮಾಡಿದ್ದರು ಎಂದು ಎಸ್ಪಿ ಅಭಿಷೇಕ್ ಹೇಳಿದ್ದಾರೆ.

ಬಿಜನೋರ್ ಮಾರ್ಗಮಧ್ಯದಲ್ಲಿ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಎಂಬುವವರು ಶಾಮ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ಇಬ್ಬರನ್ನೂ ಅಕ್ರಮವಾಗಿ ಇರಿಸಿಕೊಂಡಿದ್ದರು ಎನ್ನಲಾಗಿದ್ದು, ಅಲ್ಲಿ ಯುವಕ ಮೃತಪಟ್ಟಿದ್ದಾನೆ. ಪೊಲೀಸರು ಸಾವಿನ ಕಾರಣವನ್ನು ತಿಳಿಯಲು ತನಿಖೆ ನಡೆಸುತ್ತಿದ್ದು, ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಪಿಐ ಶ್ಯಾಮ್ ಸಿಂಗ್ ಹೇಳಿದ್ದಾರೆ. ಯಾವುದೇ ನಿರ್ಧಾರಕ್ಕೆ ಬರಲಿಲ್ಲವಾದರೂ, ಯುವಕ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಠಾಣಾಧಿಕಾರಿ ಅವಿನಾಶ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್, ಮಹಿಳಾ ಪಿಸಿ ಅನು ಮತ್ತು ಹೆಡ್ ಕಾನ್ಸ್ಟೇಬಲ್ ರಾಜೀವ್ ಅವರನ್ನು ಅಮಾನತುಗೊಳಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News