ಪ್ರಜಾಪ್ರಭುತ್ವದಿಂದ ಚುನಾವಣಾ ನಿರಂಕುಶಾಧಿಕಾರದತ್ತ ಭಾರತ!

Update: 2024-03-08 16:18 GMT

Photo : PTI

ಹೊಸದಿಲ್ಲಿ: ಮೌಲ್ಯಮಾಪನ ಮಾಡಲಾಗಿರುವ 179 ದೇಶಗಳ ಪೈಕಿ ಭಾರತದಲ್ಲಿ ಕಳೆದ 2013ರ ನಂತರ ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದ್ದು, ತನ್ನ ವರದಿಯಲ್ಲಿ ವಿ-ಡೆಮ್ (ವೆರೈಟೀಸ್ ಆಫ್ ಡೆಮಾಕ್ರಸಿಯು) ತನ್ನ ಅಂಕಗಳಲ್ಲಿ ಭಾರತವನ್ನು ಶೇ. 40-50ರ ಕೆಳಗೆ ಇಟ್ಟಿರುವುದು ಬಹಿರಂಗಗೊಂಡಿದೆ. ಈ ವರದಿಯಲ್ಲಿ ಭಾರತವನ್ನು ನೈಗರ್ (ಮೇಲ್ ಶ್ರೇಯಾಂಕ) ಹಾಗೂ ಐವರಿ ಕೋಸ್ಟ್ (ಕೆಳ ಶ್ರೇಯಾಂಕ)ದ ನಡುವೆ ಇಡಲಾಗಿದೆ.

ಭಾರತವು ಜಾಗತಿಕವಾಗಿ ಮೊದಲ 10 ನಿರಂಕುಶಾಧಿಕಾರಗಳ ಪೈಕಿ ಒಂದಾಗಿ ಹೊರಹೊಮ್ಮಿದ್ದು, 1975ರಲ್ಲಿನ ವಿಶ್ಲೇಷಣೆಗೆ ಹೋಲಿಸಿದರೆ, ಭಾರತದ ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ಕುಸಿತವುಂಟಾಗಿದೆ ಎಂಬುದರತ್ತ ಆಘಾತಕಾರಿ ಪ್ರವೃತ್ತಿಗಳು ಬೊಟ್ಟು ಮಾಡಿವೆ. ಗಮನಾರ್ಹ ಸಂಗತಿಯೆಂದರೆ, ಜಾಗತಿಕವಾಗಿ ನಿರಂಕುಶಾಧಿಕಾರದ ಅಡಿಯಲ್ಲಿರುವ ಸುಮಾರು ಅರ್ಧದಷ್ಟು ದೇಶಗಳ ಪೈಕಿ ಭಾರತವು ಸ್ಥಾನ ಹಂಚಿಕೊಂಡಿದೆ.

ಪ್ರಜಾಪ್ರಭುತ್ವದ ಕುಸಿತ: ಒಂದು ಜಾಗತಿಕ ವಿದ್ಯಮಾನ

ನಿರಂಕುಶಾಧಿಕಾರವು ಜಾಗತಿಕ ಮಟ್ಟದಲ್ಲಿ ಏರಿಕೆಯಾಗಿದ್ದು, ವಿಶ್ವದ ಶೇ. 35ರಷ್ಟು ಜನಸಂಖ್ಯೆಯನ್ನು ಹೊಂದಿರುವ 42 ದೇಶಗಳು ಹೊಸದಾಗಿ ಈ ಪ್ರವೃತ್ತಿಯನ್ನು ಅನುಭವಿಸುತ್ತಿವೆ. ಏರಿಕೆಯಾಗುತ್ತಿರುವ ನಿರಂಕುಶಾಧಿಕಾರ ವಿದ್ಯಮಾನಕ್ಕೆ ಜಗತ್ತಿನ ಜನಸಂಖ್ಯೆಯ ಪೈಕಿ ಶೇ. 18ರಷ್ಟು ಜನಸಂಖ್ಯೆ ಹೊಂದಿರುವ ಭಾರತವು ಗಮನಾರ್ಹ ಕೊಡುಗೆ ನೀಡಿರುವುದು ವಿ-ಡೆಮ್ ವರದಿಯಲ್ಲಿ ಬೆಳಕಿಗೆ ಬಂದಿದೆ. ಈ ಹಿಂದೆ ಪ್ರಜಾಪ್ರಭುತ್ವ ದೇಶ ಎಂದು ಗುರುತಿಸಿಕೊಂಡಿದ್ದ ಭಾರತವು 2018ರಲ್ಲಿ ಚುನಾವಣಾ ನಿರಂಕುಶಾಧಿಕಾರವಾಗಿ ರೂಪಾಂತರಗೊಂಡಿದೆ ಹಾಗೂ 2023ರ ಕೊನೆಗೂ ಈ ಪ್ರವೃತ್ತಿ ಮುಂದುವರಿದಿದೆ ಎಂಬುದರತ್ತ ವರದಿಯು ಬೊಟ್ಟು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News