65 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಸಂಸತ್ ಭವನದಲ್ಲಿ 'ದೋಷ' ಎಂದಿದ್ದ ವಾಸ್ತು ತಜ್ಞ!

Update: 2024-02-07 09:40 GMT

Photo: NDtv

ಹೊಸದಿಲ್ಲಿ: 1997ರಲ್ಲಿ ಪ್ರಖ್ಯಾತ ವಾಸ್ತು ತಜ್ಞ ಖುಷ್ ದೀಪ್ ಬನ್ಸಾಲ್, “ಸಂಸತ್ ಭವನದ ಗ್ರಂಥಾಲಯದಲ್ಲಿ ವಾಸ್ತುದೋಷ ಇರುವುದೇ ಸರ್ಕಾರಗಳು ಬೀಳಲು ಕಾರಣ” ಎಂದು ಹೇಳಿಕೆ ನೀಡಿ ಭಾರಿ ಸುದ್ದಿ ಮಾಡಿದ್ದರು. 30 ವರ್ಷಗಳ ನಂತರ, ಮತ್ತೆ ಬನ್ಸಾಲ್ ಹೆಸರು ಮುನ್ನೆಲೆಗೆ ಬಂದಿದೆ. ಆದರೆ, ಈ ಬಾರಿ ರೂ. 65 ಕೋಟಿ ವಂಚನೆ ಪ್ರಕರಣದಲ್ಲಿ ಎಂದು ndtv.com ವರದಿ ಮಾಡಿದೆ.

ಸೋಮವಾರ ದಿಲ್ಲಿ ಪೊಲೀಸ್ ಇಲಾಖೆಯ ವಿಶೇಷ ಘಟಕದ ಸಹಯೋಗದೊಂದಿಗೆ ಅಸ್ಸಾಂ ಪೊಲೀಸರು ಬನ್ಸಾಲ್ ಹಾಗೂ ಅವರ ಸಹೋದರನನ್ನು ಬಂಧಿಸಿದ್ದಾರೆ. ದಿಲ್ಲಿ ವಿಶೇಷ ಘಟಕದ ಪ್ರತಿ ಗುಪ್ತಚರ ಘಟಕವು ಬನ್ಸಾಲ್ ಅವರನ್ನು ರಾಷ್ಟ್ರ ರಾಜಧಾನಿಯ ಬಾರಾಖಂಬ ಪ್ರದೇಶದಿಂದ ಬಂಧಿಸಿದೆ.

ಸೋಮವಾರ ಬೆಳಗ್ಗೆ ವರ್ಗಾವಣೆ ವಶದ ಆಧಾರದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದ ಅಸ್ಸಾಂ ಪೊಲೀಸರು, ರೂ. 65 ಕೋಟಿ ಮೊತ್ತದ ಸ್ವಾಯತ್ತ ಮಂಡಳಿ ವಂಚನೆ ಪ್ರಕರಣವನ್ನು ಎದುರಿಸುತ್ತಿರುವ ಆರೋಪಿಗಳನ್ನು ತಕ್ಷಣವೇ ಅಸ್ಸಾಂಗೆ ಕರೆದೊಯ್ದರು. ಈ ಹಗರಣದಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ನಾಯಕರ ಪುತ್ರರೊಬ್ಬರೂ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ಬನ್ಸಾಲ್ ವಿರುದ್ಧ ದಿಲ್ಲಿ ಮೂಲದ ಸಬರ್ವಾಲ್ ಟ್ರೇಡಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ ನ ಮಾಲಕ ಕಮಲ್ ಸಬರ್ವಾಲ್ ವಂಚನೆಯ ಪ್ರಕರಣವನ್ನು ದಾಖಲಿಸಿದ್ದರು.

ಕಮಲ್ ಸಬರ್ವಾಲ್ ಅವರಿಗೆ ನಾನು ವ್ಯಕ್ತಿಯೊಬ್ಬರನ್ನು ಪರಿಚಯಿಸಿ, ನಂತರ ನಾನೇ ಹಗರಣದಲ್ಲಿ ಭಾಗಿಯಾದೆ ಎಂದು ಬನ್ಸಾಲ್ ದಿಲ್ಲಿ ಪೊಲೀಸರೆದುರು ತಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ, ವಿಸ್ತೃತ ಹಗರಣದಲ್ಲಿ ಎಲ್ಲ ಆರೋಪಿಗಳೂ ಒಟ್ಟಾಗಿ ಭಾಗಿಯಾಗಿಯಾಗಿರುವುದು ಮುನ್ನೆಲೆಗೆ ಬಂದಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

ಬನ್ಸಾಲ್ ಹಲವಾರು ರಾಜ್ಯ ಸರ್ಕಾರಿ ಯೋಜನೆಗಳಿಗೆ ಸಮಾಲೋಚಕರಾಗಿದ್ದು, ಪ್ರಖ್ಯಾತ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ವ್ಯೂಹಾತ್ಮಕ ಸಲಹೆಗಾರರೂ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News