ಭಯೋತ್ಪಾದನೆ, ಲವ್ ಜಿಹಾದ್ ಎದುರಿಸಲು ಜಮ್ಮು ಕಾಶ್ಮೀರದ ಹೆಣ್ಣುಮಕ್ಕಳಿಗೆ ವಿಎಚ್‌ಪಿ ತರಬೇತಿ

ಜುಲೈ 3 ರಂದು ಆರಂಭವಾದ ಒಂದು ವಾರದ ಶಿಬಿರದಲ್ಲಿ ಕೇಂದ್ರಾಡಳಿತ ಪ್ರದೇಶದ 12 ಜಿಲ್ಲೆಗಳಿಂದ 18 ವರ್ಷ ವಯಸ್ಸಿನ ಹಲವು ಹೆಣ್ಣು ಮಕ್ಕಳು ಭಾಗವಹಿಸಿದ್ದರು. ಯೋಗ ಮತ್ತು ಆಯುಧರಹಿತ ತಂತ್ರಗಳ ಜೊತೆಗೆ, ಹೆಣ್ಣುಮಕ್ಕಳಿಗೆ ರೈಫಲ್ ಮತ್ತು ಕತ್ತಿಗಳ ಬಳಕೆಯ ಬಗ್ಗೆಯೂ ತರಬೇತಿ ನೀಡಲಾಗಿದೆ ಎಂದು ವರದಿಯಾಗಿದೆ.

Update: 2023-07-09 17:28 GMT
Editor : Muad | Byline : ವಾರ್ತಾಭಾರತಿ

Photo: PTI 

ಜಮ್ಮು: ಭಯೋತ್ಪಾದಕ ದಾಳಿ ಸಂದರ್ಭ ಮತ್ತು ಲವ್ ಜಿಹಾದನ್ನು ಎದುರಿಸಲು ವಿಶ್ವ ಹಿಂದೂ ಪರಿಷತ್ ನ ಅಂಗ ಸಂಸ್ಥೆ ದುರ್ಗಾ ವಾಹಿನಿ ಜಮ್ಮು ಕಾಶ್ಮೀರದ ಹೆಣ್ಣು ಮಕ್ಕಳಿಗೆ ‘ತರಬೇತಿ ಶಿಬಿರ‘ ನಡೆಸಿರುವುದಾಗಿ ವರದಿಯಾಗಿದೆ. ಈ ಶಿಬಿರದಲ್ಲಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಕಲೆಗಳನ್ನು ಕಲಿಸಿ ಕೊಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಜುಲೈ 3 ರಂದು ಆರಂಭವಾದ ಒಂದು ವಾರದ ಶಿಬಿರದಲ್ಲಿ ಕೇಂದ್ರಾಡಳಿತ ಪ್ರದೇಶದ 12 ಜಿಲ್ಲೆಗಳಿಂದ 18 ವರ್ಷ ವಯಸ್ಸಿನ ಹಲವು ಹೆಣ್ಣು ಮಕ್ಕಳು ಭಾಗವಹಿಸಿದ್ದರು. ಯೋಗ ಮತ್ತು ಆಯುಧರಹಿತ ತಂತ್ರಗಳ ಜೊತೆಗೆ, ಹೆಣ್ಣುಮಕ್ಕಳಿಗೆ ರೈಫಲ್ ಮತ್ತು ಕತ್ತಿಗಳ ಬಳಕೆಯ ಬಗ್ಗೆಯೂ ತರಬೇತಿ ನೀಡಲಾಗಿದೆ ಎಂದು ವರದಿಯಾಗಿದೆ.

ರಕ್ಷಣಾ ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ, ಶಿಬಿರವು ಹುಡುಗಿಯರಿಗೆ 'ಲವ್ ಜಿಹಾದ್' ಬಗ್ಗೆ ಅರಿವು ಮೂಡಿಸಿದೆ ಎಂದು ವಿಎಚ್‌ಪಿ ಸದಸ್ಯರೊಬ್ಬರು ಹೇಳಿದ್ದಾರೆ. ‘‘ಜುಲೈ 3 ರಿಂದ ನಾವು ಏಳು ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಿದ್ದೇವೆ, ಆತ್ಮರಕ್ಷಣೆ ಮತ್ತು ವ್ಯಕ್ತಿತ್ವ ವಿಕಸನವನ್ನು ಕೇಂದ್ರೀಕರಿಸಿದ್ದೇವೆ’’ ಎಂದು ದುರ್ಗಾ ವಾಹಿನಿಯ ಮುಖ್ಯಸ್ಥೆ ಶಬ್ನಮ್ ಖಜುರಿಯಾ ಪಿಟಿಐಗೆ ತಿಳಿಸಿದ್ದಾರೆ.

ಹೆಣ್ಣುಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವುದು ಮತ್ತು ಭಯೋತ್ಪಾದನೆಯಿಂದ ಹಿಡಿದು ಎಲ್ಲ ವಿಪತ್ತುಗಳ ಸಂದರ್ಭಗಳನ್ನು ಎದುರಿಸುವ ಬಗ್ಗೆ ಅವರನ್ನು ಸಿದ್ಧಪಡಿಸುವ ಗುರಿಯನ್ನು ನಾವು ಹೊಂದಿದ್ದೆವು ಎಂದವರು ಹೇಳಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News